ಎಂಆರ್‌ಪಿಎಲ್‌ ನಲ್ಲಿ ಅನಿಲ ಸೋರಿಕೆ: ಇಬ್ಬರು ಕಾರ್ಮಿರ ಸಾವು, ಓರ್ವನ ಸ್ಥಿತಿ ಗಂಭೀರ

Most read

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ ಲಿ. (ಎಂಆರ್‌ಪಿಎಲ್‌) ಘಟಕದಲ್ಲಿ ಹೈಡ್ರೋಜನ್ ಸಲ್ಫೈಡ್ (ಎಚ್2ಎಸ್) ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟು ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಉತ್ತರಪ್ರದೇಶ ಮೂಲದ ದೀಪ್‌ಚಂದ್ರ (33) ಮತ್ತು ಕೇರಳದ ನಿಖಿಲ್ ಪ್ರಸಾದ್ (33) ಮೃತಪಟ್ಟ ಕಾರ್ಮಿಕರು. ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂವರು ಕಾರ್ಮಿಕರು ಎಂಆರ್‌ಪಿಎಲ್‌ನ ಒಎಂಆ್ಯಂಡ್‌ಎಸ್ ಘಟಕದ ಶೇಖರಣಾ ಪ್ರದೇಶದಲ್ಲಿ ನಿರ್ವಹಣೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ತ್ಯಾಜ್ಯ ತೈಲ ಸಂಗ್ರಹಣ ಘಟಕದಲ್ಲಿ ಲೆವೆಲ್‌ ಬದಲಾವಣೆ ಪರಿಶೀಲನೆಗೆ ತೆರಳಿದ್ದ ಕಾರ್ಮಿಕ ಹಿಂತಿರುಗಿ ಬಾರದೇ ಇದ್ದುದರಿಂದ ಮತ್ತಿಬ್ಬರು ಕಾರ್ಮಿಕರು ಅಲ್ಲಿಗೆ ತೆರಳಿದ್ದಾರೆ. ಅಲ್ಲಿ ಮೂವರೂ ಅಸ್ವಸ್ಥಗೊಂಡಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವುದಕ್ಕೂ ಮುನ್ನವೇ ಇಬ್ಬರು ಕಾರ್ಮಿಕರು ಕೊನೆಯುಸಿರೆಳೆದಿದ್ದಾರೆ.

ಇದೀಗ ಎಂಆರ್‌ಪಿಎಲ್‌ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದೆ. ಸೋರಿಕೆ ಈಗ ಸಂಪೂರ್ಣವಾಗಿ ನಿಂತಿದೆ ಎಂದು ಎಂಆರ್‌ ಪಿಎಲ್‌ ತಿಳಿಸಿದೆ.

More articles

Latest article