ತೆಂಗಿನಕಾಯಿ ಜತೆಗೆ ಕೊಬ್ಬರಿ, ಚಿಪ್ಪು, ಕಾಯಿಸಿಪ್ಪೆ ಬೆಲೆ ಹೆಚ್ಚಳ: ರೈತರಿಗೆ ಖುಷಿ

Most read

ಹಾಸನ: ತೆಂಗಿನ ಕಾಯಿ ಬೆಲೆ ಏರಿಕೆಯಾಗುತ್ತಿದ್ದಂತೆ ತೆಂಗಿನ ಉತ್ಪನ್ನಗಳ ಬೆಲೆಯೂ ಏರಿಕೆಯಾಗುತ್ತಿದೆ. ಕೆಲವು ತಿಂಗಳ ಹಿಂದೆ ಕೊಬ್ಬರಿ ಬೆಲೆ ಕುಸಿದು ತೆಂಗು ಬೇಳೆಗಾರರು ಕಂಗಾಲಾಗಿದ್ದರು. ಇದೀಗ ಕೊಬ್ಬರಿ ಜೊತೆಗೆ ಕಾಯಿ, ಚಿಪ್ಪು, ಕಾಯಿ ಸಿಪ್ಪೆ  ಬೆಲೆಯೂ ಏರಿಕೆ ಕಂಡಿದ್ದು  ಕೂಡ ಏರಿಕೆ ಆಗಿರುವುದು ತೆಂಗು ಬೆಳೆಯುವ ರೈತರು ಸಂತಸ ಪಡುತ್ತಿದ್ದಾರೆ. ಆದರೆ ಈ ವರ್ಷ ಫಸಲು ಕಡಿಮೆಯಾಗಿರುವುದು ಅವರ ಬೇಸರಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆಯು ಕ್ವಿಂಟಲ್‌ ಗೆ ರೂ.25ಸಾವಿರದಿಂದ ರೂ.31 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದ್ದಿಲಿಗೆ ಬಳಸುವ  ಒಂದು ಜತೆ ತೆಂಗಿನ ಚಿಪ್ಪಿಗೆ ರೂ.2.50 ರಿಂದ ರೂ.3 ಕ್ಕೆ ಮಾರಾಟವಾಗುತ್ತಿದೆ. ಕಳೆದ ವರ್ಷ ಕೇವಲ ಐವತ್ತು ಪೈಸೆ ನಿಗದಿಯಾಗಿತ್ತು. ಚಿಪ್ಪಿನ ಬೆಲೆ ಹೆಚ್ಚುತ್ತಿದ್ದಂತೆ, ಅಡುಗೆ ಬಳಸಿದ ನಂತರ ಚಿಪ್ಪನ್ನು ಮಹಿಳೆಯರು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ.

ತೆಂಗಿನಕಾಯಿ ಸಿಪ್ಪೆಗೂ ಬೆಲೆ ಬಂದಿದೆ. ಈಗ ಒಂದು ಸಾವಿರ ಸಿಪ್ಪೆಯ (ಮಟ್ಟೆ) ಬೆಲೆ ರೂ. 800 ರಿಂದ ರೂ. 1 ಸಾವಿರಕ್ಕೆ ಮಾರಾಟವಾಗುತ್ತಿದೆ.  ಕಳೆದ ವರ್ಷ ಕೇಳುವವರಿಲ್ಲದೆ ಕೊಬ್ಬರಿ, ಕಾಯಿ ಸುಲಿದ ನಂತರ ಸಾವಿರಾರು ಸಿಪ್ಪೆಗಳನ್ನು ರಸ್ತೆ ಪಕ್ಕ, ತೋಟಗಳ ಬದಿಗೆ ಎಸೆಯುತ್ತಿದ್ದರು.

ನಾರಿನ ಹಾಸಿಗೆ (ಕಾಯರ್ ಬೆಡ್) ತಯಾರು ಮಾಡಲು ತಮಿಳುನಾಡು ರಾಜ್ಯಕ್ಕೆ ಸಿಪ್ಪೆ ಪೂರೈಕೆಯಾಗುತ್ತಿದ್ದು ಇದರ ಬೆಲೆಯೂ ಹೆಚ್ಚಿದೆ. ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಲು ಬಳಸುವ ಗೊಬ್ಬರ ತಯಾರು ಮಾಡಲು ಸಿಪ್ಪೆ ಬಳಸಲಾಗುತ್ತಿದ್ದು ಬೇಡಿಕೆ ಹೆಚ್ಚುತ್ತಿದೆ.

ಸಧ್ಯಕ್ಕೆ ಮಾರುಕಟ್ಟೆಗಳಲ್ಲಿ ತೆಂಗಿನ ಕಾಯಿ ಕೆ.ಜಿ.ಗೆ ರೂ. 60 ರಿಂದ 70 ರೂಗೆ ಮಾರಾಟವಾಗುತ್ತಿದೆ. ಆಗಿದೆ. ಕೆಲವೇ ದಿನಗಳಲ್ಲಿ ವರಮಹಾಲಕ್ಷ್ಮೀ, ಗೌರಿ ಗಣೇಶ ಹಬ್ಬ ಬರುತ್ತಿದ್ದು ಕಾಯಿ ಬೆಲೆ ಇನ್ನೂ ಹೆಚ್ಚಾಗುವ ಸಂಭವವಿದೆ.

More articles

Latest article