ಅಸ್ವಸ್ಥಗೊಂಡರೂ ಪ್ರಯಾಣಿಕರನ್ನು ಪಾರು ಮಾಡಿದ ಸಾರಿಗೆ ಬಸ್‌ ಚಾಲಕ

Most read

ಪುತ್ತೂರು: ಬಸ್‌ ಚಾಲನೆ ಮಾಡುತ್ತಿದ್ದಾಗ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ ಆರ್‌ ಟಿಸಿ) ಬಸ್‌ ಚಾಲಕ ಅಸ್ವಸ್ಥಗೊಂಡು ಸ್ಟಿಯರಿಂಗ್ ಮೇಲೆ ಬಿದ್ದರೂ ತಕ್ಷಣ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಿದ ಘಟನೆ ಪುತ್ತೂರು ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಪುತ್ತೂರಿನಿಂದ ಸುಳ್ಯಕ್ಕೆ ಬಸ್‌ ಚಾಲಕ ದಯಾನಂದ ಅವರು ಬಸ್‌ ಚಾಲನೆ ಮಾಡುತ್ತಿದ್ದರು. ಆಗ ಈ ಪ್ರಕರಣ ನಡೆದಿದೆ.

ಬಸ್ ಕಂಬ್ರಕ್ಕೆ ತಲುಪುತ್ತಿದ್ದಂತೆ ದಯಾನಂದ ಅವರು ಅಸ್ವಸ್ಥಗೊಂಡಿದ್ದರು. ಸ್ಥಳೀಯರು ಅವರನ್ನು ಕ್ಲಿನಿಕ್ ಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ನೀಡಿದ್ದರು. ಔಷಧಿ ಸೇವನೆ ನಂತರ ಚೇತರಿಸಿಕೊಂಡ ದಯಾನಂದ ಅವರನ್ನು ಮನೆಗೆ ಕಳುಹಿಸಿ ಕೊಡಲಾಯಿತು. ಮತ್ತೊಂದು ಬಸ್‌ ವ್ಯವಸ್ಥೆ ಮಾಡಿ ಪ್ರಯಾಣಿಕರನ್ನು ಕಳುಹಿಸ‌ಲಾಯಿತು ಎಂದು ಕೆಎಸ್‌ ಆರ್‌ ಟಿಸಿ ಮೂಲಗಳು ತಿಳಿಸಿವೆ.

More articles

Latest article