ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ ತ್ರೈಮಾಸಿಕದಲ್ಲಿ ರೂ.20.68 ಲಕ್ಷ ಕೋಟಿ  ಟೋಲ್‌ ಸಂಗ್ರಹ, ಶೇ 19.6ರಷ್ಟು ಹೆಚ್ಚಳ

Most read

ನವದೆಹಲಿ: 2025-26ರ ಮೊದಲ ತ್ರೈಮಾಸಿಕದಲ್ಲಿ ರೂ.20.68 ಲಕ್ಷ ಕೋಟಿ  ಟೋಲ್‌ ಸಂಗ್ರಹಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಎಲೆಕ್ಟ್ರಾನಿಕ್‌ ಟೋಲ್ ಸಂಗ್ರಹದ ಅಡಿಯಲ್ಲಿ (ಇಟಿಸಿ) ಫಾಸ್ಟ್‌ ಟ್ಯಾಗ್ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಶೇ. 19.6ರಷ್ಟು ಹೆಚ್ಚಳವಾಗಿದೆ.

ಈ ಅವಧಿಯಲ್ಲಿ ಎಲೆಕ್ಟ್ರಾನಿಕ್‌ ಟೋಲ್ ಸಂಗ್ರಹ ವ್ಯವಸ್ಥೆ ದತ್ತಾಂಶದ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಟೋಲ್ ಬಳಕೆದಾರರ ಸಂಖ್ಯೆಯೂ ಶೇ 16.2ರಷ್ಟು ಹೆಚ್ಚಾಗಿದ್ದು, 1,173 ಮಿಲಿಯನ್‌ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 1,009.87 ಮಿಲಿಯನ್ ನಷ್ಟಿದ್ದರು.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ ಎಚ್‌ ಎಐ) 2025ರ ಏಪ್ರಿಲ್ 1ರಿಂದ ದೇಶದಾದ್ಯಂತ ಜಾರಿಗೆ ಬರುವಂತೆ ಟೋಲ್ ಶುಲ್ಕವನ್ನು ಶೇ 5ರಷ್ಟು ಹೆಚ್ಚಳ ಮಾಡಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುವ ಉದ್ದೇಸದಿಂದ ಕೇಂದ್ರ ಸರ್ಕಾರ ಆಗಸ್ಟ್‌ 15ರಿಂದ ಫಾಸ್ಟ್‌ ಟ್ಯಾಗ್‌ ಆಧಾರಿತ ವಾರ್ಷಿಕ ಪಾಸ್‌ ಜಾರಿಗೊಳಿಸಲಿದೆ ಎಂದು ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಈಗಾಗಲೇ ತಿಳಿಸಿದ್ದಾರೆ.

ವಾರ್ಷಿಕ ಪಾಸ್‌  ಪಡೆದುಕೊಂಡರೆ ಫಾಸ್ಟ್‌ ಟ್ಯಾಗ್ ಕಾರ್ಡ್‌ ಗಳನ್ನು ಪದೇ ಪದೇ ರೀಚಾರ್ಜ್ ಮಾಡುವ ಅಥವಾ ಹೆದ್ದಾರಿ ಶುಲ್ಕ ವಸೂಲಿ ಕೇಂದ್ರಗಳಲ್ಲಿ ನಗದು ಬಳಸಿ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಎಂದು ಗಡ್ಕರಿ ಅವರು ತಿಳಿಸಿದ್ದರು.ಈಗಾಗಲೇ ಫಾಸ್ಟ್‌ ಟ್ಯಾಗ್ ಹೊಂದಿರುವವರು ಹೊಸ ಫಾಸ್ಟ್‌ ಟ್ಯಾಗ್ ಖರೀದಿಸುವ ಅಗತ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

More articles

Latest article