ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರು ನಾಮಕರಣಕ್ಕೆ ಹೆಚ್ಚಿದ ಬೇಡಿಕೆ

Most read

ಮಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಿದ ನಂತರ ಇದೀಗ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ.

ದಕ್ಷಿಣ ಕನ್ನಡ ಎಂಬ ಹೆಸರಿಗೆ ಅಷ್ಟಾಗಿ ಮನ್ನಣೆ ಇಲ್ಲ. ಹೊರರಾಜ್ಯಗಳಲ್ಲಿ ಗುರುತಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಯ ಅಭಿವೃದ್ಧಿಯ ದೃಷ್ಟಿಯಿಂದ  ಜಿಲ್ಲಾ ಕೇಂದ್ರವಾದ ಮಂಗಳೂರು ಎಂಬ ಹೆಸರಿನಲ್ಲೇ ಜಿಲ್ಲೆಯನ್ನು ಕರೆಯಬೇಕು ಎಂಬ ಕೂಗು ಹೆಚ್ಚುತ್ತಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕಿಂಗ್, ಆರೋಗ್ಯ, ರಕ್ಷಣೆ, ಶಿಕ್ಷಣ ಮತ್ತು ಉದ್ಯಮದ ಕೇಂದ್ರವಾಗಿ ಮಂಗಳೂರು ಹೆಸರು ಮಾಡಿದೆ. ಜಿಲ್ಲೆಯ ಹೆಸರನ್ನು ಅದರ ಪ್ರಮುಖ ನಗರದೊಂದಿಗೆ ಜೋಡಿಸುವುದರಿಂದ ಅಭಿವೃದ್ಧಿ ಹೆಚ್ಚುತ್ತದೆ ಎನ್ನುವುದು ಇವರ ವಾದವಾಗಿದೆ.,

ಇತ್ತೀಚೆಗೆ ನಡೆದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಕೆಸಿಸಿಐ) ಆಯೋಜಿಸಿದ್ದ ಚುನಾವಣಾ ನಂತರದ ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಬಿಜೇಶ್‌ ಚೌಟಾ ಈ ಬೇಡಿಕೆಯನ್ನು ಮಂಡಿಸಿದ್ದಾರೆ. ಅವರ ಆಗ್ರಹಕ್ಕೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ.

ಕಾಂಗ್ರೆಸ್ ಮುಖಂಡ ವಿಧಾನಪರಿಷತ್‌ ಸದಸ್ಯ  ಇವಾನ್ ಡಿಸೋಜಾ ಅವರೂ ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಆಗ್ರಹಪಡಿಸಿದ್ದಾರೆ. ರಾಜಕೀಯ ಪಕ್ಷಗಳಲ್ಲಿ ಈ ವಿಷಯವಾಗಿ ಒಮ್ಮತವಿದೆ ಎಂದೂ ಅವರು ಹೇಳಿದ್ದಾರೆ.

ಇದರಿಂದ ನಮ್ಮ  ಗುರುತು ಬಲವಾಗುತ್ತದೆ ಮತ್ತು ಮತ್ತು ಅಭಿವೃದ್ಧಿಯ ವೇಗ ಹೆಚ್ಚುತ್ತದೆ ಎನ್ನುವುದು ಇವರ ವಾದ. ಹಲವು ಕೈಗಾರಿಕೋದ್ಯಮಿಗಳು, ಉದ್ಯಮಿಗಳು ವ್ಯಾಪಾರಿಗಳು ಮತ್ತು ಸ್ತಳೀಯರು ಈ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ.

More articles

Latest article