ಭಾರತದ ಮೇಲೆ ಚೀನಾ ನಿರ್ಬಂಧ: ಪ್ರಧಾನಿ ಮೌನಕ್ಕೆ ಖರ್ಗೆ ಟೀಕೆ, ಸರಣಿ ಪ್ರಶ್ನೆಗೆ ಉತ್ತರಿಸಲು ಆಗ್ರಹ

Most read

ನವದೆಹಲಿ: ರಸಗೊಬ್ಬರಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ಹೇರಿರುವುದು, ಭಾರತದ ಉತ್ಪಾದನಾ ಘಟಕಗಳನ್ನು ಚೀನಾದ ಎಂಜಿನಿಯರ್‌ಗಳು ತೊರೆಯುತ್ತಿರುವುದು ಹಾಗೂ ಅಪರೂಪದ ಲೋಹಗಳ ರಫ್ತಿನ ಮೇಲೆ ಚೀನಾ ನಿರ್ಬಂಧ ವಿಧಿಸುತ್ತಿರುವುದನ್ನು ಉಲ್ಲೇಖಿಸಿ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿದ್ದಾರೆ.

 ಎಕ್ಸ್‌  ಮೂಲಕ ಸರಣಿ ಪ್ರಶ್ನೆಗಳನ್ನು ಕೇಳಿರುವ ಅವರು ಭಾರತದ ಉತ್ಪಾದನಾ ವಲಯದಿಂದ ಚೀನಾ ತನ್ನ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದಲ್ಲಿ ಪ್ರಧಾನಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚೀನಾದ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡಲು ಡೋಕ್ಲಾಂ ಹಾಗೂ ಗಲ್ವಾನ್ಅನ್ನು ಮರೆಯಲಾಯಿತು. ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್) ಯೋಜನೆಯ ಲಾಭ ಪಡೆಯಲು ಚೀನಾ ನಾಗರಿಕರಿಗೆ ಸುಲಭವಾಗಿ ವೀಸಾ ನೀಡಲಾಯಿತು ಎನ್ನುವುದು ನಿಜವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತದ ಐಫೋನ್ ತಯಾರಿಕಾ ಘಟಕವನ್ನು ಚೀನಾದ ಎಂಜಿನಿಯರ್ಗಳು ತೊರೆಯುತ್ತಿದ್ದಾರೆ. ಅಟೋಮೊಬೈಲ್, .ವಿ, ರಕ್ಷಣೆ ಹಾಗೂ ಭಾರಿ ಭದ್ರತೆ ಇರುವ ಕರೆನ್ಸಿಗಳ ಮುದ್ರಣಕ್ಕೆ ಅತಿ ಅಗತ್ಯವಿರುವ ಅಪರೂಪದ ಲೋಹಗಳನ್ನು ಭಾರತಕ್ಕೆ ರಫ್ತು ಮಾಡಲು ಚೀನಾ ನಿರ್ಬಂಧ ಹೇರಿದೆ. ಆದರೂ ಮೋದಿ ಸರ್ಕಾರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಭಾರತಕ್ಕೆ ಚೀನಾ ರಸಗೊಬ್ಬರ ಪೂರೈಕೆ ಮಾಡುತ್ತಿಲ್ಲ. ಇದರಿಂದ ದೇಶದ ರೈತರು ಕಂಗಾಲಾಗಿದ್ದಾರೆ.  ಭಾರತ ಚೀನಾದಿಂದ ಶೇ 80ರಷ್ಟು ವಿಶೇಷ ರಸಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತದೆ. ಇವು ಹಣ್ಣು, ತರಕಾರಿ ಹಾಗೂ ಇನ್ನಿತರ ಲಾಭದಾಯಕ ಕೃಷಿಗಳ ಇಳುವರಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಚೀನಾದ ಈ ನಡೆ ಈಗಾಗಲೇ ಡಿಎಪಿ ಹಾಗೂ ಯೂರಿಯಾದ ಕೊರತೆ ಎದುರಿಸುತ್ತಿರುವ ರೈತರಿಗೆ ಇನ್ನಷ್ಟು ಹಾನಿಮಾಡುವುದಿಲ್ಲವೇ? ಎಂದೂ ಖರ್ಗೆ ಪ್ರಶ್ನಿಸಿದ್ದಾರೆ.

ನಿಮ್ಮ ಸರ್ಕಾರದ ಚೀನಾ ಗ್ಯಾರಂಟಿಗೆ ಯಾವುದೇ ಎಕ್ಸ್‌ ಪೈರಿ ದಿನಾಂಕ ಇಲ್ಲ. ಗಲ್ವಾನ್‌ ನಲ್ಲಿ 20 ವೀರ ಯೋಧರ ಬಲಿದಾನದ ಬಳಿಕವೂ ನೀವು ಚೀನಾಗೆ ಕ್ಲಿನ್ ಚಿಟ್ ನೀಡಿದ್ದೀರಿ. ಇಂದು ಚೀನಾ ಅದರ ಪೂರ್ಣ ಲಾಭ ಪಡೆಯುತ್ತಿದೆ. ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.

More articles

Latest article