ಆಪರೇಷನ್​ ಸಿಂಧೂರ: ಪಾಕಿಸ್ತಾನದ 9 ಯುದ್ಧ ವಿಮಾನಗಳು ನಾಶ: ಭಾರತೀಯ ಸೇನಾ ಪಡೆ ಯಶಸ್ಸು

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ ನಲ್ಲಿ ದಾಳಿ ನಡೆದ ನಂತರ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಆಪರೇಷನ್​ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಯುದ್ಧ ವಿಮಾನಗಳು, ಹತ್ತಕ್ಕೂ ಹೆಚ್ಚು ಆತ್ಮಹತ್ಯಾ ಡ್ರೋಣ್​ ಹಾಗೂ ಕ್ಷಿಪಣಿಗಳನ್ನು ಭಾರತೀಯ ಸೇನಾ ಪಡೆ ಹೊಡೆದು ಹಾಕಿವೆ ಎಂದು ತಿಳಿದು ಬಂದಿದೆ.

ಈ ಮೂಲಕ ಪಾಕಿಸ್ತಾನ ಭಾರಿ ಮಿಲಿಟರಿ ನಷ್ಟ ಅನುಭವಿಸಿದೆ ಎಂದು ಪಾಕಿಸ್ತಾನದ ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. 

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ವೇಳೆ 6 ಯುದ್ಧ ವಿಮಾನಗಳನ್ನು ಆಕಾಶದಲ್ಲೇ ಹೊಡೆದು ಉರುಳಿಸಲಾಗಿದೆ. ಪಾಕಿಸ್ತಾನದ ವಾಯು ನೆಲೆಯಲ್ಲಿದ್ದ ಎರಡು ವಿಮಾನಗಳು ಹಾಗೂ ಸಿ-130 ಸಾರಿಗೆ ವಿಮಾನವನ್ನು ಹೊಡೆದು ಹಾಕಲಾಗಿದೆ ಎಂದು ಭಾರತೀಯ ವಾಯುಪಡೆ ನೀಡಿದ ದತ್ತಾಂಶಗಳ ತಾಂತ್ರಿಕ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.

ಭಾರತದ ವಾಯು ರಕ್ಷಣಾ ವ್ಯವಸ್ಥೆಯಾದ ಸುದರ್ಶನ್​, ವಿಮಾನಗಳನ್ನು 300 ಕಿಮೀ ದೂರದಲ್ಲಿ ಹೊಡೆದು ಹಾಕಿದೆ. ಭಾರತದ ಕಡೆ ಬರುತ್ತಿದ್ದ ಡ್ರೋಣ್‌ ಗಳು ಮತ್ತು ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. ಆದರೆ ನಾಶವಾಗಿರುವ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಅವಶೇಷಗಳನ್ನು ಪಾಕಿಸ್ತಾನ ಹೊರತೆಗೆಯುತ್ತಿಲ್ಲ ಎಂದು ತಿಳಿದು ಬಂದಿದೆ. ಆದರೂ ಪಾಕಿಸ್ತಾನ ತನ್ನ ಮಿಲಿಟರಿ ನಾಶದ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.

More articles

Latest article

Most read