ಛತ್ತೀಸ್ ಘಡದಲ್ಲಿ ನಕ್ಸಲರ ಹತ್ಯೆಗೆ ಖಂಡನೆ; ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ʼಶಾಂತಿಗಾಗಿ ನಾಗರಿಕರ ವೇದಿಕೆʼ ಆಗ್ರಹ

Most read

ವಿಷಯ: ಛತ್ತೀಸ್ ಘಡದಲ್ಲಿ ನಕ್ಸಲರು ಹಾಗೂ ಆದಿವಾಸಿಗಳ ಮಾರಣಹೋಮ ಮತ್ತು ಮತ್ತು ಕಾರ್ಯಾಚರಣೆಯನ್ನು ನಿಲ್ಲಿಸಿ ಮಾತುಕತೆಯ ಮೂಲಕ ಶಾಂತಿ ಮರುಸ್ಥಾಪಿಸಬೇಕೆಂದು ಬೆಂಗಳೂರಿನ `ಶಾಂತಿಗಾಗಿ ನಾಗರಿಕರ ವೇದಿಕೆ’ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ವೇದಿಕೆಯ ಪರವಾಗಿ ನಗರಗೆರೆ ರಮೇಶ, ವಿ. ಎಸ್. ಶ್ರೀಧರ, ತಾರಾ ರಾವ್, ನೂರ್ ಶ್ರೀಧರ್. ಕೆ.ಪಿ. ಶ್ರೀಪಾಲ್ ಅವರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಛತ್ತೀಸ್ ಘಡದಲ್ಲಿ ಕೇಂದ್ರ ಸರ್ಕಾರ ನಡೆಸಿರುವ ನಕ್ಸಲರ ಹಾಗೂ ಆದಿವಾಸಿಗಳ ಮಾರಣಹೋಮವನ್ನು ಶಾಂತಿಗಾಗಿ ನಾಗರೀಕರ ವೇದಿಕೆಯು ಖಂಡಿಸುತ್ತದೆ ಮತ್ತು ಮಾತುಕತೆಯ ಮೂಲಕ ಶಾಂತಿ ಮರುಸ್ಥಾಪಿಸಲು ಒತ್ತಾಯಿಸುತ್ತದೆ.

ಛತ್ತೀಸ್ ಘಡದಲ್ಲಿ ಕಳೆದ ಆರು ತಿಂಗಳಿಂದ CRPF, CoBRA, ಗ್ರೇ ಹೌಂಡ್ ಮೊದಲಾದ ಪಡೆಗಳ ನೇತೃತ್ವದಲ್ಲಿ ನಕ್ಸಲ್ ಚಳವಳಿಯನ್ನು ಹತ್ತಿಕ್ಕಲು ತೀವ್ರತರನಾದ ಪ್ರಯತ್ನಗಳು ನಡೆಯುತ್ತಿವೆ. ಇದುವರೆಗೆ 300 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕೆಲವು ಪ್ರಮುಖ ನಕ್ಸಲರು ಇದ್ದಾರೆಯಾದರೂ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಯುವಕರನ್ನೂ ಸಹ ನಕ್ಸಲ್ ಹಣೆಪಟ್ಟಿ ಕಟ್ಟಿ ಕೊಲ್ಲಲಾಗಿದೆ. ಮಾರ್ಚ್ ಅಂತ್ಯದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಐ [ಮಾವೋಯಿಸ್] ನಕ್ಸಲ್ ಸಂಘಟನೆಯ ಕೇಂದ್ರ ಸಮಿತಿಯು, ಜನರ ಹಿತರಕ್ಷಣೆಯ ದೃಷ್ಟಿಯಿಂದ ತಾವು ಮಾತುಕತೆಗೆ ಸಿದ್ಧವಿರುವುದಾಗಿ, ತೆಲಂಗಾಣ, ಛತ್ತೀಸ್ ಘಡ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಆದರೆ ಮಾತುಕತೆಯನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ ಏಪ್ರಿಲ್ 20 ರಿಂದ ಆಪರೇಷನ್ ಕಗಾರ್ ಅನ್ನು ಆರಂಭಿಸಿದೆ. 10 ಸಾವಿರ ಸಂಖ್ಯೆಯ ಪೋಲೀಸ್ ಬಲವನ್ನು ನಿಯೋಜಿಸಿ ನಕ್ಸಲರ ಕೇಂದ್ರ ತಾಣವಾದ ಕರೆಗುಟ್ಟಲು ಪರ್ವತ ಶ್ರೇಣಿಗಳನ್ನು ಸುತ್ತುವರೆದು ನಕ್ಸಲರು ಮತ್ತು ಆದಿವಾಸಿಗಳ ಹತ್ಯೆಯನ್ನು ಮುಂದುವರೆಸಿದೆ. ಇತ್ತೀಚಿಗೆ ಮಾವೋವಾದಿಗಳ ಪ್ರಧಾನ ಕಾರ್ಯದರ್ಶಿಯಾದ ಬಸವರಾಜು ಅವರನ್ನೂ ಒಳಗೊಂಡಂತೆ ಇನ್ನು ಅನೇಕರನ್ನು ಭೀಕರವಾಗಿ ಹತ್ಯೆಗೈಯ್ಯಲಾಗಿದೆ. ಛತ್ತೀಸ್ ಘಡದ ಮುಖ್ಯಮಂತ್ರಿ ವಿಷ್ಣು ದೇವ ಮತ್ತು ಕೇಂದ್ರ ಗೃಹ ಸಚಿವ ಅಮೀತ್ ಶಾ ಇಬ್ಬರೂ,ʼ ಮಾತುಕತೆ ಇಲ್ಲ, ಕೇವಲ ನಿರ್ನಾಮ” ಎಂದು ಪ್ರತಿಕ್ರಿಯಿಸಿರುವುದು ಅವರ ರಕ್ತದಾಹಿ ಧೋರಣೆಯನ್ನು ಸೂಚಿಸುತ್ತದೆ. ಮಾತುಕತೆಗೆ ಮುಂದಾದವರನ್ನು ಹತ್ಯೆಗೈಯ್ಯುವುದು ಅನಾಕರೀಕ ಮತ್ತು ಫ್ಯಾಸಿಸ್ಟ್ ನಡತೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ನಕ್ಸಲರು ಅನುಸರಿಸುತ್ತಿರುವ ಮಾರ್ಗವನ್ನು ನಾವು ಒಪ್ಪದಿರಬಹುದು. ಆದರೆ ಅವರು ಸಾಮಾಜಿಕ ಬದಲಾವಣೆಗಾಗಿ ಸಶಸ್ತ್ರ ಹಿಡಿದಿರುವ ಸಾಮಾಜಿಕ ಹೋರಾಟಗಾರರು ಎಂಬುದನ್ನು ನಾವು ಮನಗಾಣಬೇಕಿದೆ. ಹೋರಾಟಗಾರರನ್ನು ಕ್ರಿಮಿನಲ್ ಗಳಂತೆ ನಡೆಸಿಕೊಳ್ಳುವುದು ಮಹಾಪರಾಧವಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ದೊಡ್ಡ ಫ್ಯಾಸಿಸ್ಟ್‌ ನಡತೆಯಾಗಿದೆ. ಆದರೆ ಅವರು ಸಾಮಾಜಿಕ ಬದಲಾವಣೆಗಾಗಿ ಸಶಸ್ತ್ರ ಹಿಡಿದಿರುವ ಸಾಮಾಜಿಕ ಹೋರಾಟಗಾರರು ಎಂಬುದನ್ನು ನಾವು ಮನಗಾಣಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಯುವಕರನ್ನು ಕೊಲ್ಲುವುದನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ರಕ್ತ ಪಿಪಾಸುತನವನ್ನು ಬಿಟ್ಟು, ನಕ್ಸಲರೊಂದಿಗೆ ಮಾತುಕತೆಯನ್ನು ಆರಂಭಿಸಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂದು ಶಾಂತಿಗಾಗಿ ನಾಗರೀಕ ವೇದಿಕೆ ಬಲವಾಗಿ ಆಗ್ರಹಿಸುತ್ತದೆ. ಮಾತುಕತೆಗೆ ಪೂರ್ವಭಾವಿಯಾಗಿ ಕದನ ವಿರಾಮ ಜಾರಿಗೊಳ್ಳಬೇಕು, ಎರಡೂ ಕಡೆಯವರು ಶಸ್ತ್ರಗಳನ್ನು ಕೆಳಗಿಟ್ಟು ಮಾತುಕತೆಗೆ ಬೇಕಾದ ವಾತಾವರಣವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಕ್ಸಲರನ್ನು ಪ್ರಜಾತಾಂತ್ರಿಕ ಹಾಗೂ ಮಾನವೀಯ ನೆಲೆಯ ಮೇಲೆ ಮುಖ್ಯವಾಹಿನಿಗೆ ತರುವ ವಿಚಾರದಲ್ಲಿ ಕರ್ನಾಟಕ ಒಂದು ಉತ್ತಮ ಮಾದರಿಯನ್ನು ಕಟ್ಟಿಕೊಟ್ಟಿದೆ. ನಾಗರೀಕ ಸಮಾಜದ ಮಧ್ಯಪ್ರವೇಶದ ಮೂಲಕ ನಡೆದ ಈ ಪ್ರಯತ್ನದಿಂದಾಗಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಟುವಟಿಕೆ ಸಕರಾತ್ಮಕ ರೀತಿಯಲ್ಲಿ ಸಮಾರೋಪಗೊಂಡಿದೆ. ಕೇಂದ್ರ ಸರ್ಕಾರ ಕರ್ನಾಟಕದ ಮಾದರಿಯನ್ನು ಅನುಸರಿಸಬೇಕು ಮತ್ತು ನಾಗರೀಕ ಸಮಾಜದ ಮಧ್ಯಸ್ತಿಕೆಯೊಂದಿಗೆ ಮಾತುಕತೆಯ ಮೂಲಕ ಈ ಸಂಘರ್ಷವನ್ನು ಮುಕ್ತಾಯಗೊಳಿಸಬೇಕು ಎಂದು ಶಾಂತಿಗಾಗಿ ನಾಗರೀಕ ವೇದಿಕೆ ಒತ್ತಾಯಿಸಿದೆ.

More articles

Latest article