ನಟ ದರ್ಶನ್‌ ಮೇಕಪ್ ಆರ್ಟಿಸ್ಟ್ ಹೊನ್ನೇಗೌಡ ನಿಧನ; ಛಾಲೆಂಜಿಂಗ್‌ ಸ್ಟಾರ್‌ ಸಂತಾಪ

Most read

ಬೆಂಗಳೂರು: ನಟ ದರ್ಶನ್‌ ಅವರ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದ ಹೊನ್ನೇಗೌಡ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ದರ್ಶನ್ ಎಕ್ಸ್‌ ನಲ್ಲಿ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಅನೇಕ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹೊನ್ನೇಗೌಡ ಅವರು ಸಕ್ರಿಯವಾಗಿದ್ದರು. ನನ್ನ ಹಲವು ಸಿನಿಮಾಗಳಿಗೆ ಅವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು.

ಇಂದು ಅವರು ಅಗಲಿದ ಸುದ್ಧಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು.ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೇಗೌಡರ ಆತ್ಮಕ್ಕೆ ಶಾಂತಿ ಎಂದು ಕೋರಿದ್ದಾರೆ.

ದರ್ಶನ್ ಅವರ ಬಹುತೇಕ ಸಿನಿಮಾಗಳಿಗೆ ಹೊನ್ನೇಗೌಡ ಅವರೇ ಮೇಕಪ್ ಆರ್ಟಿಸ್ಟ್ ಆಗಿದ್ದರು. ಆ ದಿನಗಳನ್ನು ದರ್ಶನ್ ಈಗ ಮೆಲುಕು ಹಾಕಿದ್ದಾರೆ. ಕನ್ನಡ ಚಿತ್ರರಂಗದ ಅನೇಕ ನಟ, ನಿರ್ಮಾಪಕ ನಿರ್ದೇಶಕರು ಹೊನ್ನೇಗೌಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

More articles

Latest article