ರೈತ ಮುಖಂಡ ಟಿಕಾಯತ್ ಶಿರಚ್ಛೇದನಕ್ಕೆ ರೂ.5 ಲಕ್ಷ ಬಹುಮಾನ ಘೋಷಿಸಿದ್ದ ವ್ಯಕ್ತಿ ವಿರುದ್ಧ ದೂರು ದಾಖಲು

Most read

ಮೀರತ್: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ, ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ತಲೆ ಕಡಿದವರಿಗೆ ರೂ.5 ಲಕ್ಷ ಬಹುಮಾನ ನೀಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಆರೋಪದಡಿಯಲ್ಲಿ ಅಮಿತ್ ಚೌಧರಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಟಿಕಾಯತ್ ಶಿರಚ್ಛೇದ ಮಾಡಿದವರಿಗೆ ರೂ.5 ಲಕ್ಷ ಬಹುಮಾನ ನೀಡುವುದಾಗಿ ಆರೋಪಿ ಪೋಸ್ಟ್ ಮಾಡಿದ್ದ ವಿಡಿಯೋ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮಿತ್‌ ಹಂಚಿಕೊಂಡಿದ್ದ ಪೋಸ್ಟ್ ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮುಜಫರ್‌ ನಗರ ಮತ್ತು ಮೀರತ್‌ ನಲ್ಲಿ ಟಿಕಾಯತ್ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ ಆರೋಪಿ ಚೌಧರಿ, ಟಿಕಾಯತ್ ವಿರುದ್ಧ ಇಂತಹ ಹೇಳಿಕೆ ನೀಡಲು ಕಾರಣ ಏನು ಎನ್ನುವುದು ಬಹಿರಂಗವಾಗಿಲ್ಲ.

More articles

Latest article