Thursday, December 12, 2024

ಸಕಲೇಶಪುರದಲ್ಲಿ ಹೆಚ್ಚಾದ ಬೀದಿನಾಯಿಗಳ ಹಾವಳಿ : ಎಂಟು ಜನರು ಆಸ್ಪತ್ರೆಗೆ ದಾಖಲು

Most read

ಹಾಸನ : ಸಕಲೇಶಪುರ ತಾಲೂಕಿನಲ್ಲಿ ಮಿತಿಮೀರಿದ ಬೀದಿ ನಾಯಿಗಳ ಹಾವಳಿಯಿಂದ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನಗರದ ತೇಜಸ್ವಿ ಸರ್ಕಲ್ ಬಳಿ ನಾಯಿಗಳು ರಸ್ತೆಯಲ್ಲಿ ಹೋಗುತ್ತಿದ್ದವರೆಗೆ ಕಚ್ಚಿ ಗಾಯಗೊಳಿಸಿದೆ. ಇದರಲ್ಲಿ ಶಿಕ್ಷಕಿ ಸಾಜೀಯಾ, ಅಡುಗೆ ಕೆಲಸದಾಕೆ ಆಯುಷಾ, ಅಕ್ಷತಾ, ಜಯಂತ್, ದಮಯಂತಿ, ಈಶ್ವರ್, ಪಾಲಾಕ್ಷ ಇವರುಗಳು ಬೀದಿ ನಾಯಿ ದಾಳಿಗೊಳಗಾದವರು.

ಶಾಲೆಗೆ ತೆರಳಲೆಂದು ತೇಜಸ್ವಿ ಸರ್ಕಲ್ ಬಳಿ ಬಸ್‌ಗೆ ಕಾಯುತ್ತಿದ್ದ ಅಕ್ಷತಾ, ಸಾಜೀಯಾ, ಆಯುಷಾಗೆ ಈ ವೇಳೆ ಬೀದಿ ನಾಯಿಗಳು ದಾಳಿ ಮಾಡಿವೆ. ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಹೋಗತ್ತಿದ್ದವರನ್ನು ಸೇರಿ ಎಂಟು ಜನಕ್ಕೆ ಕಚ್ಚಿವೆ ಎಂದು ತಿಳಿದು ಬಂದಿದೆ.

ಸುಮಾರು ಒಂದು ವಾರದಿಂದಲೂ ಸಿಕ್ಕಸಿಕ್ಕವರ ಮೇಲೆ ಶ್ವಾನಗಳು ದಾಳಿ ಮಾಡುತ್ತಿದ್ದವು. ಕಳೆದ ಒಂದು ವಾರದಿಂದ ಹದಿನಾರು ಜನಕ್ಕೆ ಬೀದಿನಾಯಿಗಳು ಕಚ್ಚಿವೆ. ಇದರ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಪುರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಾಯಗೊಂಡಿರುವ ನಾಗರೀಕರನ್ನು ಬೇಟಿ ಮಾಡಲು ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲೇ ಸ್ಥಳದಲ್ಲಿದ್ದ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಕೂಡಲೇ ಬೀದಿ ನಾಯಿಗಳನ್ನು ಸೆರೆ ಹಿಡಿಯುವಂತೆ ಸೂಚನೆ ನೀಡಿದ್ದಾರೆ.

ನಾಯಿ ಕಡಿದವರಿಗೆ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಇಲ್ಲ ಕಾರಣ ನಾಯಿ ಕಡಿತಕ್ಕೊಳದಾವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

More articles

Latest article