ಬೆಂಗಳೂರು: ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಆರಂಭವಾಗಿದೆ. ಗುಡುಗು ಮಿಂಚು ಸಹಿತ ಎಡಬಿಡದೆ ಮಳೆಯಾಗುತ್ತಿದೆ. ಮಳೆ ಸಂಜೆ ನಂತರ ಆರಂಭವಾಗಿದ್ದು, ಉದ್ಯೋಗಿಗಳು ಮನೆ ತಲುಪುವ ಧಾವಂತದಲ್ಲಿದ್ದರೂ ಮಳೆಯಲ್ಲಿ ಸಿಲುಕಿದ್ದಾರೆ. ಅಂಗಡಿ ಮುಂಗಟ್ಟುಗಳ ಎದುರು ಮತ್ತು ಅಂಡ್ ಪಾಸ್ ಗಳಲ್ಲಿ ಆಶ್ರಯಪಡೆದಿದ್ದಾರೆ.
ವಡ್ಡರಪಾಳ್ಯದಿಂದ ಗೆದ್ದಲ ಹಳ್ಳಿ ರೈಲ್ವೆ ಅಂಡರ್ ಪಾಸ್ ಹೆಣ್ಣೂರು ಕಡೆಗೆ ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ. ಆರ್ ಟಿ ನಗರ ಸಿಬಿಐ ಫ್ಲೈಓವರ್ ಯಿಂದ ವಿಮಾನ ನಿಲ್ದಾಣದ ಕಡೆಗೆ ವಾಹನ ಸಂಚಾರ ನಿಧಾನವಾಗಿದೆ. ಹೆಬ್ಬಾಳದಿಂದ ಗುರುಗುಂಟೆಪಾಳ್ಯ ಮತ್ತು ಗುರುಗುಂಟೆಪಾಳ್ಯದಿಂದ ಹೆಬ್ಬಾಳ ಕಡೆಗೆ ವಾಹನ ದದಟ್ಟನೆ ಹೆಚ್ಚಾಗಿದೆ. ಮಳೆಯಿಂದಾಗಿ ಭಾರತೀಯ ವಾಯುಪಡೆಯಿಂದ ವಿಮಾನ ನಿಲ್ದಾಣ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಮಳೆಯಿಂದಾಗಿ ಪೀಣ್ಯ ಮೇಲ್ಸೇತುವೆಯಿಂದ ಪಾರ್ಲೆ ಟೋಲ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
4. ಮರ ಬಿದ್ದಿರುವುದರಿಂದ ಶೇಷಾದ್ರಿಪುರಂನಿಂದ ಜಟ್ಕಾ ಸ್ಟ್ಯಾಂಡ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆನೀರು ನಿಂತಿರುವುದರಿಂದ ಲುಲು ಮಾಲ್‌ನಿಂದ ಮೆಜಾಸ್ಟಿಕ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
ವಿಧಾನಸೌಧ, ಮಲ್ಲೇಶ್ವರಂ, ಕೆ ಆರ್ ಮಾರುಕಟ್ಟೆ, ರಾಜಾಜಿನಗರ, ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಮೊದಲಾದ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಎಂದಿನಂತೆ ಓಕಳಿಪುರಂ ಅಂಡರ್ ಪಾಸ್ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಶೇಷಾದ್ರಿಪುರಂ ನಲ್ಲಿ ಮರವೊಂದು ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಟಾಫ್ರಿಕ್ ಜಾಮ್ ಉಂಟಾಗಿದೆ. ಮಳೆ ಕಾರಣಕ್ಕೆ ಅನೇಕ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಯಶವಂತಪುರ, ಗೊರಗುಂಟೆಪಾಳ್ಯ ರಸ್ತೆಗಳಲ್ಲಿ ಕಿಮೀ ಉದಕ್ಕೂ ವಾಹನಗಳ ಸಾಲು ಕಾಣಬಹುದಾಗಿದೆ. ತಗ್ಗು ಪ್ರದೇಶದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿದೆ. ಮನೆಗಳ ನಿವಾಸಿಗಳು ನೀರನ್ನು ಎತ್ತಿ ಆಚೆ ಹಾಕಲು ಪರದಾಡುತ್ತಿದ್ದಾರೆ.