ಜಮ್ಮು: ಜಮ್ಮು ಮತ್ತು ಕಾಶ್ಮೀರದ (ಏಪ್ರಿಲ್ 30) ರಾಂಬನ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಮಳೆ ಮತ್ತು ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಂದ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಬುಧವಾರ ಬಿಜೆಪಿ ಸರ್ಕಾರವು ಒತ್ತಾಯಿಸಿದೆ.
ರಾಂಬನ್ ಜಿಲ್ಲೆಯಲ್ಲಿ ಏಪ್ರಿಲ್ 20 ರಂದು ಮೂರು ಜನರು ಸಾವಿಗೆ ಈಡಾಗಿದ್ದಾರೆ. ಸಾವಿಗೆ ಈಡಾದ ಕುಟುಂಬಗಳಿಗೆ ಪರಿಹರವನ್ನು ಒದಗಿಸಬೇಕು.
ಅಲ್ಲಿನ ರಸ್ತೆಗಳು, ಮನೆಗಳು ಮತ್ತು ಭೂಮಿ ಸೇರಿದಂತೆ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಈ ನೈಸರ್ಗಿಕ ವಿಕೋಪಕ್ಕೆ ತುತ್ತಾದ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರಾಡಳಿತ ಪ್ರದೇಶದ ಅಧ್ಯಕ್ಷ ಸತ್ ಶರ್ಮಾ ನೇತೃತ್ವದ ಪಕ್ಷದ ನಿಯೋಗವು ಈ ಬೇಡಿಕೆಯನ್ನು ಎತ್ತಿತು.
ಪಕ್ಷದ ಶಾಸಕರಾದ ಯುಧ್ವೀರ್ ಸೇಥಿ ಮತ್ತು ದೇವಿಂದರ್ ಕುಮಾರ್ ಮಾನ್ಯಲ್, ಪ್ರಧಾನ ಕಾರ್ಯದರ್ಶಿ ವಿಬೋಧ್ ಗುಪ್ತಾ, ಜಿಲ್ಲಾಧ್ಯಕ್ಷ ನೀಲಂ ಲ್ಯಾಂಗೆ ಅವರೊಂದಿಗೆ ಶರ್ಮಾ, ಹೆಚ್ಚು ಹಾನಿಗೊಳಗಾದ ಧರ್ಮಕುಂಡ್ಗೆ ಭೇಟಿ ನೀಡಿ, ಸ್ಥಳೀಯ ಪರಿಸ್ಥಿತಿಯನ್ನು ಮನಗಂಡರು. ಅಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.