ಬಣ್ಣ ಬಣ್ಣದ ಡೋನಟ್‌ ಆರೋಗ್ಯಕ್ಕೆ ಅಪಾಯಕಾರಿ; ಅಲರ್ಜಿ, ಕ್ಯಾನ್ಸರ್‌ ಗೂ ಕಾರಣವಾಗಬಹುದು: ಎಚ್ಚರಿಕೆ ನೀಡಿದ ಇಲಾಖೆ

Most read

ಬೆಂಗಳೂರು: ಮಕ್ಕಳು ಅತಿ ಹೆಚ್ಚು ಇಷ್ಟಪಡುವ ಜನಪ್ರಿಯ ತಿಂಡಿ ಡೋನಟ್‌ ಸುರಕ್ಷಿತವೇ? ಮಕ್ಕಳಿಗೆ ಕೊಡಿಸುವ ಮುನ್ನ ಒಮ್ಮೆ ಯೋಚಿಸಿ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಸುರಕ್ಷಿತ ಎಂದು ಘೋಷಿಸಿದೆ.
ಡೋನಟ್ ಗಳಲ್ಲಿ ಅತಿಯಾದ ಕೃತಕ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದು ಅನುಮೋದಿತ ಸುರಕ್ಷತಾ ಮಿತಿಗಳನ್ನು ಮೀರಿದೆ. ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಎಫ್‌ ಡಿ ಎ ಎಚ್ಚರಿಕೆ ನೀಡಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಪರೀಕ್ಷೆಗೊಳಪಡಿಸಿದಾಗ ಡೋನಟ್ ಗಳಲ್ಲಿ ಅತಿಯಾದ ಕೃತಕ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಕಾರ್ಯನಿರ್ವಹಿಸುತ್ತಿರುವ ಒಟ್ಟು 12 ಆಹಾರ ಮಳಿಗೆಗಳ ಆಹಾರ ಮಾದರಿಗಳನ್ನು ಅಧಿಕಾರಿಗಳು ಪರಿಶೀಲನೆಗೋಪಡಿಸಿದ್ದಾರೆ. ಎರಡು ಪ್ರಮುಖ ಮಳಿಗೆಗಳಿಗೆ ನೋಟಿಸ್ ನೀಡಲಾಗದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾಕೇಜ್ಡ್ ಕುಡಿಯುವ ನೀರು, ತುಪ್ಪ, ಸಿಹಿತಿಂಡಿಗಳು, ಫಾಸ್ಟ್ ಫುಡ್ ಮತ್ತು ಮಸಾಲೆ ಪುಡಿಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಆಹಾರ ಬ್ರ್ಯಾಂಡ್ ಕಂಪನಿಯೊಂದಕ್ಕೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಆಹಾರ ಮಾದರಿಗಳ ಫಲಿತಾಂಶಗಳು ಇನ್ನೂ ಬಾಕಿಯಿದ್ದು, ವರದಿಗಳಿಗಾಗಿ ಕಾಯಲಾಗುತ್ತಿದೆ. ಡೋನಟ್ ಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ರೆಡ್- 40 ಅಥವಾ ಅಲ್ಲುರಾ ರೆಡ್, ಎಲ್ಲೋ- 5 ಅಥವಾ ಟಾರ್ಟ್ರಾಜಿನ್‌ ನಂತಹ ಬಣ್ಣಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರ ಎಂದು ಎಫ್ ಡಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಣ್ಣಗಳನ್ನು ಕಡಿಮೆ ಬಳಕೆ ಮಾಡಿದರೆ ಮಾತ್ರ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ, ಆದರೆ ಅವುಗಳನ್ನು ಅತಿಯಾಗಿ ಬಳಕೆ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಡೋನಟ್‌ ಸೇವನೆ ಮಾಡಿದಾಗ ಚರ್ಮದ ಊತ ಅಲರ್ಜಿ ಮತ್ತಿತರ ರೋಗಗಳು ಕಾಣಿಸಿಕೊಳ್ಳಬಹುದು. ಮಕ್ಕಳಲ್ಲಿ ಹೈಪರ್‌ ಆಕ್ಟಿವಿಟಿ ಕಾಣಿಸಿಕೊಳ್ಳಬಹುದು. ದೀರ್ಘಾವಧಿಯಲ್ಲಿ ಕ್ಯಾನ್ಸರ್ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಎದುರಾಗಲೂಬಹುದು ಎಂದು ಅವರು ತಿಳಿಸಿದ್ದಾರೆ.

More articles

Latest article