ಬೆಂಗಳೂರಿನಲ್ಲಿ ನಾಳೆ ಟಿಸಿಎಸ್‌ ವರ್ಲ್ಡ್‌ 10ಕೆ ಮ್ಯಾರಥಾನ್‌; ವಾಹನ ಸಂಚಾರಕ್ಕೆ ನಿರ್ಬಂಧ

Most read

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಾಳೆ, ಏಪ್ರಿಲ್‌ 27ರಂದು ಟಿಸಿಎಸ್‌ ವರ್ಲ್ಡ್‌ 10ಕೆ ಮ್ಯಾರಥಾನ್‌ ನಡೆಯಲಿದೆ. ಈ ನಿಟ್ಟಿನಲ್ಲಿ ನಾಳೆ ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಾಗಿ ಸುಗಮ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ. ಮ್ಯಾರಥಾನ್‌ ನಲ್ಲಿ ಸುಮಾರು 30 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ವಿಧಾನಸೌಧ, ಎಂಜಿ ರಸ್ತೆ ಸುತ್ತಮುತ್ತಲಿನ ಮಾರ್ಗಗಳಲ್ಲಿ ವಾಹನಗಳ ನಿಲುಗಡೆಗೆ ಮತ್ತು ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.

ಮೆಟ್ರೋ ರೈಲು ಸೇವೆ ಮುಂಜಾನೆ ಆರಂಭ:
ಮ್ಯಾರಥಾನ್‌ ಅಂಗವಾಗಿ ಭಾನುವಾರ ಮುಂಜಾನೆ 3.30ಕ್ಕೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಎಲ್ಲಾ ನಾಲ್ಕು ಟರ್ಮಿನಲ್‌ ಗಳು ಮತ್ತು ಮೆಜೆಸ್ಟಿಕ್‌ ನಲ್ಲಿ ಪ್ರತಿ 12 ನಿಮಿಷಕ್ಕೊಂದರಂತೆ ರೈಲು ಸಂಚರಿಸಲಿದೆ.

ಕ್ಯಾಬ್‌ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್ ಸ್ಥಳಗಳು: ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಒಪೆರಾ ಜಂಕ್ಷನ್ ವರೆಗೆ.(ಎಂ.ಜಿ ರಸ್ತೆ); ಕಾವೇರಿ ಎಂಪೋರಿಯಂನಿಂದ ಮೆಯೋಹಾಲ್ ವರೆಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ.

ಮ್ಯಾರಥಾನ್‌ನಲ್ಲಿ ಭಾಗವಹಿಸಲು ಆಗಮಿಸುವವರ ವಾಹನಗಳನ್ನು ಯುಬಿ ಸಿಟಿ, ಫ್ರೀಡಂ ಪಾರ್ಕ್ ಎಲ್ಎಲ್ಸಿಪಿ ಪಾರ್ಕಿಂಗ್‌, ಗರುಡಾ ಮಾಲ್‌, ಎಂ.ಜಿ.ಲಿಡೋ ಮಾಲ್‌, ಎಜಿಸ್‌ ಜಂಕ್ಷನ್‌ ಮತ್ತು ಎಂ.ಎಸ್‌.ಬಿಲ್ಡಿಂಗ್‌ ನಲ್ಲಿ ಪಾರ್ಕಿಂಗ್‌ ಮಾಡಬಹುದಾಗಿದೆ.

More articles

Latest article