ದೆಹಲಿ ಬಿಜೆಪಿ ಸರ್ಕಾರ ವಿಧವೆ, ವಿಚ್ಛೇದಿತ ಮಹಿಳೆಯರ ಪಿಂಚಣಿ ಸ್ಥಗಿತಗೊಳಿಸಿದೆ: ಎಎಪಿ ಆರೋಪ

ನವದೆಹಲಿ: ದೆಹಲಿಯಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರ ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರಿಗೆ ಪಿಂಚಣಿ ಸ್ಥಗಿತಗೊಳಿಸಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಗಂಭೀರ ಆರೋಪ ಮಾಡಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಎಪಿ ದೆಹಲಿ ಘಟಕದ ಮುಖ್ಯಸ್ಥ ಸೌರಭ್‌ ಭಾರದ್ವಾಜ್‌, ‘ವಿಧವೆಯರು ಮತ್ತು ವಿಚ್ಛೇದಿತ ಮಹಿಳೆಯರಿಗೆ ಕಳೆದ ಎರಡು ತಿಂಗಳಿನಿಂದ ಪಿಂಚಣಿ ಸಿಕ್ಕಿಲ್ಲ. ಸಾವಿರಾರು ಮಹಿಳೆಯರ ಪಿಂಚಣಿಯನ್ನು ಕಡಿತಗೊಳಿಸಲು ಬಿಜೆಪಿ ಸರ್ಕಾರ ಸಂಚು ರೂಪಿಸುತ್ತಿದೆ. ಕಳೆದ ಎರಡು ತಿಂಗಳಿನಿಂದ ಪಾವತಿಗಳು ಸ್ಥಗಿತಗೊಂಡಿವೆ. ಇದರಿಂದ ಅವರು ಆತಂಕ್ಕೀಡಾಗಿದ್ದಾರೆ’ ಎಂದು ಹೇಳಿದ್ದಾರೆ.

ಬಿಜೆಪಿಯ ಈ ಕ್ರಮ, ಹಿಂದಿನ ಎಎಪಿ ಸರ್ಕಾರ ಜಾರಿಗೆ ತಂದಿದ್ದ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಸ್ಥಗಿತಗೊಳಿಸುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಇಡೀ ದೇಶವೇ ಬಿಜೆಪಿ ನಾಯಕರ ಅನಗತ್ಯ ಭಾಷಣಗಳನ್ನು ಕೇಳಿ ಬೇಸತ್ತಿದೆ ಎಂದು ಸೌರಭ್‌ ಭಾರದ್ವಾಜ್‌ ಟೀಕಿಸಿದ್ದಾರೆ.

More articles

Latest article

Most read