ವ್ಯಾಟಿಕನ್ ಸಿಟಿ: ರೋಮನ್ ಕ್ಯಾಥೋಲಿಕ್ ನ ಮೊದಲ ಲ್ಯಾಟಿನ್ ಅಮೆರಿಕನ್ ಮೂಲದ ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಸಿಟಿ
ತಿಳಿಸಿದೆ. ಅವರು ಇಂದು ಬೆಳಿಗ್ಗೆ 7.35ಕ್ಕೆ, ರೋಮ್ನ ಬಿಷಪ್ ಫ್ರಾನ್ಸಿಸ್ ಅವರು ನಿಧನರಾದರು.
ಪೋಪ್ ಫ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರು ನ್ಯುಮೋನಿಯಾ ದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆದ ನಂತರ
ಚೇತರಿಸಿಕೊಂಡಿದ್ದರು.
‘ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಫಾದರ್ ಫ್ರಾನ್ಸಿಸ್ ಅವರು ನಿಧನರಾಗಿರುವುದನ್ನು ನಾನು ಅತೀವ ದುಃಖದಿಂದ ಘೋಷಿಸುತ್ತಿದ್ದೇನೆ’
ಎಂದು ಕಾರ್ಡಿನಲ್ ಕೆವಿನ್ ಫಾರೆಲ್, ವ್ಯಾಟಿಕನ್ನ ಟಿವಿ ಚಾನೆಲ್ ನಲ್ಲಿ ಘೋಷಿಸಿದ್ದಾರೆ.
ಅವರು ಇಂದು ಬೆಳಿಗ್ಗೆ 7.35ಕ್ಕೆ, ರೋಮ್ನ ಬಿಷಪ್ ಫ್ರಾನ್ಸಿಸ್ ಅವರು ನಿಧನರಾದರು. ಅವರ ಇಡೀ ಜೀವನವು ಭಗವಂತನ ಸೇವೆ ಮತ್ತು ಚರ್ಚ್ಗೆ ಸಮರ್ಪಿತವಾಗಿತ್ತು ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾರ್ಜ್ ಮಾರಿಯೊ ಬರ್ಗೊಗ್ಲಿಯೊ (ಪೋಪ್ ಫ್ರಾನ್ಸಿಸ್) 2013 ರ ಮಾರ್ಚ್ 13 ರಂದು ಪೋಪ್ ಆಗಿ ಆಯ್ಕೆಯಾಗಿದ್ದರು. ಇವರ ನಿಧನಕ್ಕೆ ವಿಶ್ವದಾದ್ಯಂತ ಶೋಕ ವ್ಯಕ್ತವಾಗಿದೆ. ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್ ನಲ್ಲಿ ಶೋಕ ಸಂದೇಶ ಪ್ರಕಟಿಸಿರುವ ಅವರು ಪೋಪ್ ಅವರು ಶಾಂತಿ ಮತ್ತು ಕರುಣೆಯ ಪ್ರತೀಕವಾಗಿದ್ದರು. ರಾಜ್ಯ ಮತ್ತು ವಿಶ್ವದ ಕ್ರಿಶ್ಚಿಯನ್ ಸಮುದಾಯಕ್ಕೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಲಭ್ಯವಾಗಲಿ ಎಂದು ತಿಳಿಸಿದ್ದಾರೆ.