ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆ ಪಾವತಿಸಲು ಬಿಬಿಎಂಪಿ ಅವಕಾಶ ನೀಡಿದ್ದು, ಭರ್ಜರಿ ಆಫರ್ ಕೂಡ ನೀಡಿದೆ. ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ, 2025-26ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ಏಪ್ರಿಲ್ 30 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡಿಯಿರಿ ಎಂದು ತಿಳಿಸಿದೆ. ಆಸ್ತಿ ತೆರಿಗೆ ಪಾವತಿಸುವವರ ಪಾಲಿಗೆ ಇದೊಂದು ಸುವರ್ಣಾಕಾಶ ಎಂದು ಭಾವಿಸಬಹುದು.
ಇನ್ನು ಬಿಬಿಎಂಪಿ 2024-25ನೇ ಸಾಲಿನಲ್ಲಿ 4,930 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಶೇ.94 ರಷ್ಟು ಗುರಿ ಸಾಧಿಸಿತ್ತು. 2023-24ನೇ ಸಾಲಿನಲ್ಲಿ 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಬಿಬಿಎಂಪಿ 2025-26ನೇ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಆರು ಸಾವಿರ ಕೋಟಿ ರೂ ದಾಟುವ ಗುರಿ ಹೊಂದಿದೆ.
ಎಂಟು ವಲಯಗಳ ಪೈಕಿ, ಯಲಹಂಕ ವಲಯದಲ್ಲಿ 464.66 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಮಹದೇವಪುರ ವಲಯದಲ್ಲಿ 1,310.58 ಕೋಟಿ ರೂ. ಸಂಗ್ರಹವಾಗಿತ್ತು.