ನಮ್ಮ ಗ್ಯಾರಂಟಿಗಳಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ: ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ಕೇಂದ್ರ ಸರ್ಕಾರದ ಸಂಸ್ಥೆಗಳು, ವಿಶ್ವದ ಅಧ್ಯಯನ ಸಂಸ್ಥೆಗಳು ನಮ್ಮ ಗ್ಯಾರಂಟಿಗಳನ್ನು ಶ್ಲಾಘಿಸಿವೆ. ನಮ್ಮ ಗ್ಯಾರಂಟಿಗಳಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ . ಜನಸಾಮಾನ್ಯರಿಗೆ ಆರ್ಥಿಕ ಶಕ್ತಿ ಲಭಿಸುತ್ತದೆ ಎಂಬ ಕಾರಣಕ್ಕೆ ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಗೆ ವಿಧಾನಪರಿಷತ್ತಿನಲ್ಲಿ ಅವರು ಸುಧೀರ್ಘವಾದ ಉತ್ತರ ನೀಡಿದರು.

ನಾವು ವೈರುದ್ಯದ ಸಮಾಜಕ್ಕೆ ಪ್ರವೇಶಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಸಾಮಾಜಿಕ ಸಮಾನತೆ ಇಲ್ಲ. ದುರ್ಬಲ ವರ್ಗದವರನ್ನು ಆರ್ಥಿಕವಾಗಿ  ಸಬಲರನ್ನಾಗಿಸುವುದಲ್ಲವೋ , ಅಲ್ಲಿಯವರೆಗೂ ಸಮಾನತೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.  ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತದೆ. ಒಂದು ಅಧ್ಯಯನ ವರದಿಯಂತೆ ನಮ್ಮ ದೇಶದ 100 ಕೋಟಿ ದೇಶದ ಜನರಿಗೆ ಕೊಂಡುಕೊಳ್ಳುವ ಆಯ್ಕೆಯಿಲ್ಲ, ಶಕ್ತಿ ಇಲ್ಲ.  ಮೊದಲ ವರ್ಗದಲ್ಲಿ  14 ಕೋಟಿ ಜನರಿದ್ದು, ಅವರ ಸರಾಸರಿ ವಾರ್ಷಿಕ ಆದಾಯ 15 ಸಾವಿರ ಡಾಲರ್ (13 ಲಕ್ಷ ರೂ.), 7 ಕೋಟಿ ಕುಟುಂಬಗಳ ತಲಾ ಆದಾಯ 3 ಸಾವಿರ ಡಾಲರ್ (2.62 ಲಕ್ಷ) 20.5 ಕೊಟಿ ಕುಟುಂಬಗಳ 100 ಕೋಟಿ ಜನರು ತಲಾ ಆದಾಯ 1 ಸಾವಿರ ಡಾಲರ್ (87 ಸಾವಿರ , ಅಂದರೆ ತಿಂಗಳಗೆ ಸುಮಾರು 7 ಸಾವಿರ), ಈ ವರ್ಗದವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಹಣವಿರುವುದಿಲ್ಲ ಎಂದರು.

ಈ ದಿಸೆಯಲ್ಲಿ ಅಂತಹ ಜನರಿಗೆ ಆರ್ಥಿಕ ಸಾಮಾಜಿಕ ಸಮಾನತೆ ತರಲು ನಮ್ಮ ಸರ್ಕಾರ ಮಾಡಿರುವ ಪ್ರಮಾಣಿಕ ಪ್ರಯತ್ನ ಈ ಗ್ಯಾರಂಟಿಗಳು.\ United Nations ನ General Assembly ಅಧ್ಯಕ್ಷರಾದ ಕ್ಯಾಮರೂನ್ ದೇಶದ ಪಿಲೆಮಾನ್ ಯಾಂಗ್ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದಾರೆ. 05-03-2025 ರಂದು ಕೇರಳ ಸರ್ಕಾರದ ಅಧಿಕಾರಿಗಳ ತಂಡ ಹಾಗೂ ಇತರೆ ದಿನಾಂಕಗಳಲ್ಲಿ ಆಂಧ್ರಪ್ರದೇಶದ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿದ್ದರು. ಆ ತಂಡಗಳಿಗೆ ಗ್ಯಾರಂಟಿಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಯಿತು. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ Indian Institute of Pubic Administration ಸಂಸ್ಥೆಯ ಅಧ್ಯಕ್ಷರು , ಕೇಂದ್ರಸಚಿವರಾಗಿದ್ದಾರೆ.  ಉಪರಾಷ್ಟ್ರಪತಿಗಳ ಜಗದೀಪ್ ಧನಕರ್ ಅವರು ಅಧ್ಯಕ್ಷರಾಗಿ , ರಾಜ್ಯದ ಗ್ಯಾರಂಟಿಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಎಂದರು.

 ವಿರೋಧಪಕ್ಷದವರು  ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಸರ್ಕಾರದಲ್ಲಿ ಗ್ಯಾರಂಟಿಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಫೆಬ್ರವರಿ ಅಂತ್ಯದಲ್ಲಿ 76509 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2024-25 ರಲ್ಲಿ 52009 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಇಡಲಾಗಿದ್ದು, ಅದರಲ್ಲಿ  41560 ಕೋಟಿ ವೆಚ್ಚ ಮಾಡಲಾಗಿದೆ. ಅದರಲ್ಲಿ  ಗೃಹ ಲಕ್ಷ್ಮಿ 28608 ಕೋಟಿ – ಖರ್ಚು 22611 ಕೋಟಿ , ಗೃಹಜ್ಯೋತಿ – 9657 ಕೋಟಿ –ಖರ್ಚು 8389 ಕೋಟಿ ,ಅನ್ನಭಾಗ್ಯ 8079 ಕೊಟಿ – ಖರ್ಚು 5590 ಕೋಟಿ  ಶಕ್ತಿ ಯೋಜನೆಗೆ  5015 ಕೋಟಿಗಳಲ್ಲಿ  -4821 ಕೋಟಿ , ಯುವನಿಧಿ 650 ಕೋಟಿ- ವೆಚ್ಚ 240 ಕೋಟಿ , ಒಟ್ಟು 52009 ರಲ್ಲಿ 41650 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರದಲ್ಲಿ  ಹಣವಿಲ್ಲದಿದ್ದರೆ  1.26 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಅನ್ನಭಾಗ್ಯದ ಫಲಾನುಭವಿಗಳು , 1.60 ಕೋಟಿ ಕುಟುಂಬದ ಗೃಹಜ್ಯೋತಿಯಿಂದ ಲಾಭ ಪಡೆದಿದ್ದಾರೆ ಎಂದು ವಿವರಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ  2,70000 ಕೋಟಿ ರೂ. ಹೆಚ್ಚು ಅನುದಾನ ಇಲ್ಲದೆಯೇ ಮಂಜೂರಾತಿ ನೀಡಲಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಸೃಷ್ಟಿಯಾಯಿತು. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರದಡಿ 1,66,000 ಕೋಟಿ ಗಳನ್ನು ಮಂಜೂರು ಮಾಡಿದರುಹಣವಿಲ್ಲದೇ ಮಂಜೂರು ಮಾಡಿದ್ದ ಕಾರಣ, ಬಾಕಿ ಬಿಲ್ಲುಗಳು ಹೆಚ್ಚು ಉಳಿದವು. ಬಾರಿಯ ಬಜೆಟ್ ಗಾತ್ರ 4,09,549 ಕೋಟಿಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಆರೋಗ್ಯಕರವಾಗಿರಲು Fiscal responsibility Act ದಂತೆ ಇರುವ ಮಾನದಂಡಗಳನ್ನು ಪೂರೈಸಿರಬೇಕು. ನಾವು ಪೂರೈಸಿದ್ದೇವೆ ಎಂದು ಹೇಳಿದರು.

 ಆರ್ಥಿಕ ಹೊಣಗಾರಿಕೆ ಅಧಿನಿಯಮದ ಮಾನದಂಡದಂತೆ, ಸಾಲದ ಮೊತ್ತ GSDP ಶೇ.25 ರಷ್ಟಿರಬೇಕು, ರಾಜ್ಯ ಶೇ.24.91 ರಷ್ಟರ ಮಿತಿಯಲ್ಲಿದೆ.  ವಿತ್ತೀಯ ಕೊರತೆಯನ್ನು  GSDP ಶೇ.3 ರಷ್ಟುನ್ನು ಮೀರಬಾರದು.  2.95 % ರಷ್ಟಿದೆ. ಇದರಲ್ಲಿ ಸರ್ಕಾರ ಎಲ್ಲ ಮಾನದಂಡಗಳ ಮಿತಿಯೊಳಗಿದೆ. ಆದ್ದರಿಂದ  ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಜನರಿಗೂ ಇದರ ಬಗ್ಗೆ ಅರಿವಿದೆ ಎಂದರು.

ಸಂವಿಧಾನದ ಆರ್ಟಿಕಲ್ 46 ರಂತೆ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದೆ. ಮೊದಲು ಆಂದ್ರಪ್ರದೇಶ, ನಂತರ ಕರ್ನಾಟಕ SCSP –TSP ಕಾಯ್ದೆ ಜಾರಿಗೆ ತಂದಿತು. ಈಗ ತೆಲಂಗಾಣ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇನ್ನುಳಿದ ಯಾವುದೇ ರಾಜ್ಯದವರೂ , ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯವೂ ಕಾಯ್ದೆಯನ್ನು ಜಾರಿಗೆ ತಂದಿಲ್ಲ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದಂತೆ SCSP –TSP ಕಾಯ್ದೆಯನ್ನು ದೇಶದಲ್ಲೆಡೆ ತರಲು ಕೇಂದ್ರಕ್ಕೆ ಒತ್ತಾಯಿಸಿ ರೆಸಲ್ಯೂಷನ್ ತರಲಿ , ನಾವೆಲ್ಲರೂ ಬೆಂಬಲಿಸುತ್ತೇವೆ ಎಂದರು. 7ಡಿ ತೆಗೆಯುವ ಮುಂಚೆ  22-23 ರಲ್ಲಿ SCSP –TSP  2412 ಕೋಟಿ  ದುರುಪಯೋಗವಾಗಿದೆ. SCSP –TSP  ಅನುದಾನ ದುರ್ಬಳಕೆಯಾಗಿದೆ ಎನ್ನಲು ಪ್ರತಿಪಕ್ಷದವರಿಗೆ ನೈತಿಕತೆ ಇಲ್ಲ. ಬಿಜೆಪಿಯವರು SCSP –TSP ಕಾಯ್ದೆಯನ್ನು ಜಾರಿಗೆ ತರಲಿಲ್ಲಕಾಂಗ್ರೆಸ್ ಸರ್ಕಾರದವರು SCSP –TSP ಕಾಯ್ದೆ ತರುವ ಜೊತೆಗೆ ಮುಂಬಡ್ತಿ ಮೀಸಲಾತಿಯನ್ನೂ ಜಾರಿಗೆ ತಂದಿತು. ಮುಂಬಡ್ತಿ ಮೀಸಲಾತಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ವಿರೋಧಪಕ್ಷದವರು ದಲಿತರ ಪರ ಕೇವಲ ಮಾತಾಡಿ ಮೊಸಳೆ ಕಣ್ಣೀರು ಹಾಕಿದರೆ ಪ್ರಯೋಜನವಿಲ್ಲ. ಗುತ್ತಿಗೆಯಲ್ಲಿ ಎಸ್ ಸಿ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಪ್ರಾರಂಭಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿದ್ದು, ರಾಜ್ಯದ ಆದಾಯ ಹೆಚ್ಚಿದರೂ, ಜನರ ಆಧಾಯ ಕಡಮೆಯಾಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.  2022-23 ರಲ್ಲಿ ಬೆಂಗಳೂರಿನಲ್ಲಿ ತಲಾ ಅದಾಯ 458789 ರೂ ಇತ್ತು.  23-24 ರಲ್ಲಿ 501383, ಬೆಳಗಾವಿ 181911 ರೂ. ನಮ್ಮ ಸರ್ಕಾರದ ಅವಧಿಯ್ಲಿ 200457 , ಕಲ್ಬುರ್ಗಿ  2023-24ರಲ್ಲಿ 173226  ಇದ್ದು, ಈಗ ತಲಾ ಆದಾಯ ಹೆಚ್ಚಿದೆ.  ಹಾಲಿನ ಉತ್ಪಾದನೆ ಜಾಸ್ತಿಯಾಗಿದೆ ನಿಜ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 7 ರೂ. ಕೊಡುವುದಾಗಿ ತಿಳಿಸಿದ್ದಾರೆ. ಆದರೆ ಮಾಡಿಲ್ಲ ಎಂದಿದ್ದೀರಿ ಮುಂದಿನ ದಿನಗಳಲ್ಲಿ ಹೆಚ್ಚು ಮಾಡುತ್ತೇನೆ. ಹಾಲಿನ  ಪ್ರೋತ್ಸಾಹ ಧನವನ್ನು  2ರೂ. ನಿಂದ 5 ರೂ. ಗೆ ಹೆಚ್ಚು ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಪ್ರೋತ್ಸಾಹ ಧನ ಹೆಚ್ಚು ಮಾಡಲಿಲ್ಲ ಎಂದು ಟೀಕಿಸಿದರು.

More articles

Latest article