ಮಧ್ಯಪ್ರದೇಶ: ರೂ. 6.2 ಕೋಟಿ ಮೌಲ್ಯದ ಗಾಂಜಾ ವಶ

Most read

ಮೊರೆನಾ: ಟ್ರಕ್‌ ನಲ್ಲಿ  ಅಡಗಿಸಿ ದೆಹಲಿಗೆ ಸಾಗಿಸಲಾಗುತ್ತಿದ್ದ ರೂ. 6.2 ಕೋಟಿ ಮೌಲ್ಯದ ಕನಿಷ್ಠ 30 ಕ್ವಿಂಟಲ್‍ ಗಾಂಜಾವನ್ನು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಟ್ರಕ್‌ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಭ್ಯವಾದ ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ಮೊರೆನಾ ಪೊಲೀಸ್‌ ಠಾಣೆ ವ್ಯಾಪ್ತಿಯ ಸವಿತಾಪುರ ಬಳಿ ಮಹಾರಾಷ್ಟ್ರದಿಂದ ಬರುತ್ತಿದ್ದ ವಾಹನವನ್ನು ತಡೆಹಿಡಿದು ಪರಿಶೀಲಿಸಿದ್ದಾರೆ. ಈ ವೇಳೆ ಭಾರಿ ಪ್ರಮಾಣದ ಗಾಂಜಾವನ್ನು ಟ್ರಕ್‌ನಲ್ಲಿ ರಹಸ್ಯವಾಗಿ ಸಾಗಿಸುತ್ತಿರುವುದು ತಿಳಿದು ಬಂದಿದೆ. ಟ್ರಕ್‌ ಮಹಾರಾಷ್ಟ್ರದ ನಾಸಿಕ್‌ ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗುತ್ತಿತ್ತು. ಟ್ರಕ್‌ ಛತ್ತೀಸ್‌ಗಢ ನೋಂದಣಿ ಸಂಖ್ಯೆಯನ್ನು ಹೊಂದಿದೆ ಎಂದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ಹೇಳಿದ್ದಾರೆ.

ಕಳ್ಳಸಾಗಣೆ ಮಾಡುತ್ತಿದ್ದ ರೂ. 6.2 ಕೋಟಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು ಉತ್ತರ ಪ್ರದೇಶದ ಜೌನ್‌ಪುರ ಮೂಲದ ಟ್ರಕ್ ಚಾಲಕ ಸಮು ಯಾದವ್ ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು ದಾರು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ. ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆ ದಂಧೆಯಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆಂಬ ಅನುಮಾನವಿದೆ. ಈ ಕುರಿತು ವಿಚಾರಣೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಎಸ್‌ ಪಿ ಸಮೀರ್ ಸೌರಭ್ ತಿಳಿಸಿದ್ದಾರೆ.

More articles

Latest article