ಬೆಂಗಳೂರು: ಕೋಣನಕುಂಟೆ ಪೊಲೀಸ್ ರಾಣಾ ವ್ಯಾಪ್ತಿಯ ದೊಡ್ಡಕಲ್ಲಸಂದ್ರ, ನಾರಾಯಣನಗರದ ಜೋಡಿ ರಸ್ತೆಯಲ್ಲಿ ಕಾರಿನಲ್ಲಿ ಕುಳಿತು ಕೊಂಡೇ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 1 ಕೆಜಿ 122 ಗ್ರಾಂ ಗಾಂಜಾ ಮತ್ತು 3 ಕೆಜಿ 44 ಗ್ರಾಂ ಅಶಿಷ್ ಆಯಿಲ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ 46 ಲಕ್ಷ 10 ಸಾವಿರ ರೂಪಾಯಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಇವರನ್ನು ಬಂಧಿಸಲಾಗಿದ್ದು, ಓಡಿಸ್ಸಾ ರಾಜ್ಯದ ಅಪರಿಚಿತ ಓರ್ವ ವ್ಯಕ್ತಿಯಿಂದ ಮಾದಕ ವಸ್ತು ಗಾಂಜಾ ಮತ್ತು ಆಶಿಷ್ ಆಯಿಲ್ ಅನ್ನು ಕಡಿಮೆ ಬೆಲೆಗೆ ತಂದು ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.