ಇಂಡಿಯಾ, ಭಾರತ್, ಹಿಂದೂಸ್ಥಾನ್…  ನಿಮಗಿಷ್ಟವಾದ ಹೆಸರಿನಿಂದ ಕರೆಯಿರಿ: ಒಮರ್ ಕರೆ

Most read

ಜಮ್ಮು: ನಮ್ಮ ದೇಶಕ್ಕೆ ಭಾರತ್, ಇಂಡಿಯಾ ಮತ್ತು ಹಿಂದೂಸ್ಥಾನ್ ಎನ್ನುವ ಮೂರು ಹೆಸರುಗಳಿವೆ, ಯಾವುದು ಇಷ್ಟವೋ ಆ ಹೆಸರಿನಿಂದ ನೀವು ಕರೆಯಬಹುದು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಜನತೆಗೆ ಕರೆ ನೀಡಿದ್ದಾರೆ.

ದೇಶದ ಹೆಸರು ಭಾರತ್ ಎಂದಾದರೆ, ಅದನ್ನು ಪ್ರತ್ಯೇಕವಾಗಿ ಹಾಗೆಯೇ ಕರೆಯಬೇಕು ಎಂದು ಆರ್‌ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ನೀಡಿದ್ದ ಹೇಳಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ, ನಾವು ಭಾರತ್, ಇಂಡಿಯಾ, ಹಿಂದೂಸ್ಥಾನ್ ಎಂದು ಕರೆಯುತ್ತೇವೆ. ಯಾವ ಹೆಸರು ಸೂಕ್ತ ಎನಿಸುವುದೋ ಆ ಹೆಸರಿನಲ್ಲಿ ಕರೆಯಿರಿ ಎಂದು ಒಮರ್ ಹೇಳಿದ್ದಾರೆ.

ವಿಧಾನಸಭೆಯ ಹೊರಗೆ ವರದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಸಂವಿಧಾನವಿದೆ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾವಿದೆ, ಇವೆಲ್ಲ ಯಏಕಿದೆ? ದೇಶದ ಹೆಸರು ಭಾರತ್ ಎಂದಾದರೆ ಹಾಗೆಯೇ ಹೆಸರಿಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.  ಪ್ರಧಾನ ಮಂತ್ರಿಗಳ ವಿಮಾನದ ಮೇಲೆ ಭಾರತ್ ಮತ್ತು ಇಂಡಿಯಾ ಎಂದು ಎರಡು ಹೆಸರುಗಳಲ್ಲೂ ಬರೆಯಲಾಗಿದೆ. ಇನ್ನೊಂದೆಡೆ ಇಂಡಿಯನ್‌ ಏರ್‌ ಫೋರ್ಸ್‌ ಮತ್ತು ಇಂಡಿಯನ್ ಆರ್ಮಿ ಎಂದು ಕರೆಯುತ್ತೇವೆ. ಅದನ್ನೂ ನಾವು ಭಾರತದ್ದು ಎನ್ನುವ ದೃಷ್ಟಿಕೋನದಲ್ಲಿ ನೋಡುತ್ತೇವೆ ಎಂದರು.

More articles

Latest article