ಬೆಂಗಳೂರು: ಜೆ.ಪಿ.ನಗರದಲ್ಲಿರುವ ಯಲಚೇನಹಳ್ಳಿಯ ವಾಸಿಯಾದ ಪಿರ್ಯಾದುದಾರರು ದಿನಾಂಕ:26/02/2025 ರಂದು ಸಿಸಿಬಿ ಯ ವಿಶೇಷ ವಿಚಾರಣಾ ದಳದಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ಪಿರ್ಯಾದುದಾರರಿಗೆ ಓರ್ವ ವ್ಯಕ್ತಿಯು ತಾನು ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆಯ “R & AW” ಸಂಸ್ಥೆಯಲ್ಲಿ ಇಂಟಲಿಜೆನ್ಸ್ ಸ್ಪೆಷಲ್ ಆಫೀಸರ್ ಉದ್ಯೋಗಿಯಾಗಿದ್ದು, ಇಂಟಲಿಜೆನ್ಸ್ ಸ್ಪೆಷಲ್ ಆಫೀಸರ್ ಹುದ್ದೆ ಕೊಡಿಸುವುದಾಗಿ 30 ಕ್ಕೂ ಹೆಚ್ಚು ಯುವಕರಿಗೆ ಲಕ್ಷಾಂತರ ರೂ. ವಂಚಿಸಿದ್ದ ಓರ್ವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೈದರಾಬಾದ್ ನ ಕಂಪಲಿ ಎಂಬಲ್ಲಿಂದ ಬಂಧಿಸಿದ್ದಾರೆ.
ಬಂಧಿತ ಆರೋಪಿಯು 2021ನೇ ಸಾಲಿನಿಂದ ಕರ್ತವ್ಯದಲ್ಲಿದ್ದು, ಬೆಂಗಳೂರು ನಗರ ಕಛೇರಿಯ ಮುಖ್ಯಸ್ಥನಾಗಿರುತ್ತೇನೆ. ತನಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಇದೆಯೆಂದು ನಂಬಿಸಿ ಹಣ ಪಡೆದು ನಕಲಿ ಆದೇಶವನ್ನು ನೀಡಿ ವಂಚಿಸಿದ್ದ. ವಂಚಿತರು ಈತನ ವಿರುದ್ಧ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೊಂಡ ಸಿಸಿಬಿ ಪೊಲೀಸರು ಆಂಧ್ರಪ್ರದೇಶದ ಹೈದ್ರರಾಬಾದ್ ನ ಕಂಪಲಿ ಎಂಬ ಸ್ಥಳದಿಂದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈತ ಬೆಂಗಳೂರಿನ ಜಯನಗರದ 9ನೇ ಬ್ಲಾಕ್ ನಲ್ಲಿ ಒಂದು ಜೆರಾಕ್ಸ್ ಮತ್ತು ಸ್ಟೇಷನರಿ ಅಂಗಡಿಯನ್ನು ಹೊಂದಿರುವ ಮತ್ತೊಬ್ಬ ವ್ಯಕ್ತಿಯು ತನಗೆ ಸಹಕರಿಸುತ್ತಿದ್ದ ಎಂದು ಮಾಹಿತಿ ನೀಡಿರುತ್ತಾನೆ.