ಬೆಂಗಳೂರು: ಬೆಂಗಳೂರಿನ ಕೆಲವು ಭಾಗಗಳಲ್ಲಿ ಶುಕ್ರವಾರ ಮತ್ತು ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ. ಈ ಸಂಬಂಧ ಬೆಸ್ಕಾಂ ಪ್ರಕಟಣೆ ನೀಡಿದೆ. ವಿದ್ಯುತ್ ಕಡಿತದ ಹಿನ್ನೆಲೆಯಲ್ಲಿ ಈ ಪ್ರದೇಶಗಳ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
66/11 kV ಸೌದೇಲಾ ವಿ.ವಿ. ಕೇಂದ್ರ, 66/11 kV ದೇವರಬಿಸನಹಳ್ಳಿ ಉಪಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 21.02.2025 ಶುಕ್ರವಾರದಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿಶ್ವಪ್ರಿಯ ಲೇ ಔಟ್, ಬೇಗೂರು ಕೊಪ್ಪ ರೋಡ್, ದೇವಚಿಕ್ಕನಹಳ್ಳಿ, ಅಕ್ಷಯನಗರ, ತೇಜಸ್ವಿ ನಗರ, ಹಿರಾನಂದಿನಿ ಅಪಾರ್ಟ್ ಮೆಂಟ್, ಬೆಳ್ಳಂದೂರು, ಆರ್.ಎಂ.ಝೇಡ್, ದೇವರಬಿಸನಹಳ್ಳಿ, ಕರಿಯಮ್ಮನಪಾಳ್ಯ, ಆಕೈ ಪ್ರೋಜೆಕ್ಟ್ಸ್, ಅನುಪಮ, ಟೋಟಲ್ ಮಾಲ್, ಶೋಭಾ ಐರೀಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
66/11 kV ಪ್ರೈಮಲ್ ಟೆಕ್ ಪಾರ್ಕ್ ಉಪಕೇಂದ್ರದಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ 22.02.2025 ಶನಿವಾರ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
12 ನೇ ಹಂತ, 7ನೇ ಹಂತ, 11ನೇ ಹಂತ, ಆರ್.ಜಿ.ಎ ಇನ್ ಇನ್ ಫ್ರಾಸ್ಟ್ರಕ್ಚರ್ 1,2 ಮತ್ತು 9 ನೇ ಎ ಹಂತ, 9ನೇ ಬಿ ಹಂತ, ಇಂಟೆಲ್, ಸ್ಟೇಷನ್ ಅಕ್ಸಿಲರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.