ಏರೊ ಇಂಡಿಯಾ ಪ್ರದರ್ಶನ ಆರಂಭ; ಗಗನದಲ್ಲಿ ವಿಮಾನಗಳ ಚಿತ್ತಾರ

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಅಧ್ಯಾತ್ಮಿಕ ಮಹಾಕುಂಭ ಮೇಳ ನಡೆಯುತ್ತಿದ್ದರೆ ಬೆಂಗಳೂರಿನಲ್ಲಿ ವೈಮಾನಿಕ ಮಹಾಕುಂಭ ಮೇಳ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಬಣ್ಣಿಸಿದ್ದಾರೆ. ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಂತರಂಗದ ಆಧ್ಯಾತ್ಮ ಶಕ್ತಿ ಪ್ರದರ್ಶನ ಆ ಕುಂಭಮೇಳದಲ್ಲಿ ನಡೆಯುತ್ತಿದ್ದರೆ, ಇದು ವಾಯುನೆಲೆಯಲ್ಲಿ ನಮ್ಮ ಬಹಿರಂಗ ಶಕ್ತಿ ಪ್ರದರ್ಶನ ಎಂದು ತಿಳಿಸಿದರು.

ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಇಂದಿನಿಂದ  ಫೆ.14ರ ವರೆಗೆ ಐದು ದಿನ ನಡೆಯಲಿರುವ ಏರೊ ಇಂಡಿಯಾ ಪ್ರದರ್ಶನ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬಾಗವಹಿಸಿದ್ದರು.

ಈ ಸಂದರ್ಭದಲ್ಲಿ ತೇಜಸ್, ಸುಖೋಯ್ ಸಹಿತ ವಿವಿಧ ಯುದ್ಧ ವಿಮಾನಗಳು ಹಾರಾಡುವ ಮೂಲಕ ದೇಶ ವಿದೇಶಗಳ ಗಣ್ಯರಿಗೆ ಸ್ವಾಗತ ಕೋರಿದವು

More articles

Latest article

Most read