ಕೇಂದ್ರ ಬಜೆಟ್: ಯಾವುದು ಅಗ್ಗ? ಯಾವುದು ದುಬಾರಿ?

Most read

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಮಂಡನೆ ಬಳಿಕ ಗ್ರಾಹಕರಿಗೆ ಅಗ್ಗ ಮತ್ತು ದುಬಾರಿಯಾಗಲಿರುವ ವಸ್ತುಗಳು ಯಾವುವು? ಇಲ್ಲಿದೆ ಪಟ್ಟಿ.

ಯಾವುದು ದುಬಾರಿ?:
ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ, ಕೈಯಲ್ಲಿ ಹೆಣೆದ ಬಟ್ಟೆಗಳು, ತಂತ್ರಜ್ಞಾನ ಕ್ಷೇತ್ರದ ಸರಕುಗಳು

ಯಾವುದು ಅಗ್ಗ?:
ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳು, ಕೋಬಾಲ್ಟ್ ಉತ್ಪನ್ನಗಳು – ಎಲ್‌ಇಡಿ ಟಿವಿ, ಎಲೆಕ್ಟ್ರಿಕ್ ವಾಹನಗಳು, ಕರಕುಶಲ ವಸ್ತುಗಳು, ಸ್ವದೇಶಿ ಬಟ್ಟೆಗಳು, ಮೊಬೈಲ್, ಚರ್ಮದ ಉತ್ಪನ್ನಗಳು.

ನಿರ್ಮಲಾ ಸೀತಾರಾಮನ್ ಸತತ ಎಂಟು ಬಾರಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ ಏಕೈಕ ಹಣಕಾಸು ಸಚಿವೆ ಎಂಬ ಸಾಧನೆಗೆ ಭಾಜನರಾಗಿದ್ದಾರೆ. ಜುಲೈ 2019ರಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಿದ್ದಾರೆ. ಕಾಗದ ರಹಿತವಾಗಿ ಟ್ಯಾಬ್ಲೆಟ್ ಮೂಲಕ ಕೇಂದ್ರ ಬಜೆಟ್ 2025 ಅನ್ನು ಮಂಡಿಸಿದ್ದಾರೆ. 2014ರಿಂದ ನರೇಂದ್ರ ಮೋದಿ ಸರ್ಕಾರದ ಸತತ 14ನೇ ಬಜೆಟ್ ಇದಾಗಿದೆ. ಇದರಲ್ಲಿ 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಮಂಡಿಸಲಾದ 2 ಮಧ್ಯಂತರ ಬಜೆಟ್ ಕೂಡ ಸೇರಿವೆ.

More articles

Latest article