ರೂ. 12 ಲಕ್ಷ ಆದಾಯದವರೆಗೆ ತೆರಿಗೆ ಇಲ್ಲ ; ವಿಮಾ ವಲಯದಲ್ಲಿ ಎಫ್ಡಿಐ ಮಿತಿಯನ್ನು 74 ಪ್ರತಿಶತದಿಂದ 100 ಪ್ರತಿಶತಕ್ಕೆ ಹೆಚ್ಚಳ
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ವಿಶ್ವಾಸ್, ಪ್ರಯಾಸ್. 90ಲಕ್ಷ ತೆರಿಗೆದಾರರು ಸ್ವಯಂ ಪ್ರೇರಿತವಾಗಿ ಆದಾಯ ಘೋಷಿಸಿಕೊಂಡಿದ್ದಾರೆ. ತೆರಿಗೆದಾರರ ಮೇಲಿನ ನಮ್ಮ ವಿಶ್ವಾಸದಿಂದ ಮೋಸವಾಗಿಲ್ಲ. ಮಧ್ಯಮ ವರ್ಗ ಗಮನದಲ್ಲಿರಿಸಿಕೊಂಡು ಆದಾಯ ತೆರಿಗೆ ಬದಲಾವಣೆ.
ಪ್ಯಾನ್ ಕಾರ್ಡ್ ರಹಿತ TDS ಮೇಲೆ ಹೆಚ್ಚಿನ ವಂತಿಗೆ. 4 ವರ್ಷಕ್ಕೆ ಪರಿಷ್ಕೃತ ಟ್ಯಾಕ್ಸ್ ಸಲ್ಲಿಕೆ. ಶಿಕ್ಷಣದ ಮೇಲಿನ ಪಾವತಿಗೆ TDS ಕಡಿತ ಇಲ್ಲ. ಬಾಡಿಗೆ ಮನೆಗಳ ಟಿಡಿಎಸ್ ಮಿತಿ 6 ಲಕ್ಷದವರೆಗೆ ಹೆಚ್ಚಳ. ಬಾಡಿಗೆ ತೆರಿಗೆ ವಿನಾಯಿತಿ 2.4ಲಕ್ಷದಿಂದ 6ಲಕ್ಷಕ್ಕೆ ಏರಿಕೆ.
ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆಯು ಮಂಡನೆ. ಇದರಿಂದ ತೆರಿಗೆದಾರರಿಗೆ ಹೆಚ್ಚು ಪ್ರಯೋಜನವಾಗಲಿದೆ. ಶಿಕ್ಷಣ ಕುರಿತ ಪಾವತಿಗೆ ಟಿಡಿಎಸ್ ಕಡಿತ ಇಲ್ಲ.
ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 36 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸಂಕದಿಂದ ರಿಯಾಯಿತಿ.
ಎಲ್ಲಾ ಸರ್ಕಾರಿ ಶಾಲೆಗಳಿಗೂ ಬ್ರಾಂಡ್ಬ್ಯಾಂಡ್ ಸಂಪರ್ಕ; ಜಲಜೀವನ ಮಿಷನ್ ಯೋಜನೆ ಇನ್ನಷ್ಟು ವಿಸ್ತರಣೆ.
ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ. ಸಾರ್ವಜನಿಕ ಬ್ಯಾಂಕ್ಗಳ ಮೂಲಕ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸೌಲಭ್ಯಗಳ ವಿಸ್ತರಣೆ
ಭಾರತ್ ಟ್ರೇಡ್ ನೆಟ್ವರ್ಕ್ ಮೂಲಕ ಹಣಕಾಸು ಕ್ಷೇತ್ರದಲ್ಲಿ ನೆರವು. ಜಾಗತಿಕ ಪೂರೈಕೆ ಸರಪಳಿಯಲ್ಲಿ ದೇಶಿ ಉತ್ಪನ್ನಗಳ ಮಾರಾಟದಲ್ಲಿ ತೊಡಗುವವರಿಗೆ ಈ ಯೋಜನೆ ಮೂಲಕ ಸಹಕಾರ.
ವಿಮಾ ವಲಯದಲ್ಲಿ ಎಫ್ಡಿಐ ಮಿತಿಯನ್ನು 74 ಪ್ರತಿಶತದಿಂದ 100 ಪ್ರತಿಶತಕ್ಕೆ ಹೆಚ್ಚಳ.
ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗ.
ಹಿರಿಯ ನಾಗರಿಕರಿಗೆ 1 ಲಕ್ಷದ ವರೆಗೆ ಟಿಡಿಎಸ್ ವಿನಾಯಿತಿ; ಮಧ್ಯಮ ವರ್ಗವನ್ನೇ ಕೇಂದ್ರೀಕರಿಸಿದ ತೆರಿಗೆ ಸುಧಾರಣೆ.
ಟಿಡಿಎಸ್ ಮತ್ತು ಟಿಸಿಎಸ್ ವಿಧಾನದಲ್ಲಿ ಸುಧಾರಣೆ. ಟಿಡಿಎಸ್ 7 ಲಕ್ಷದಿಂದ 10 ಲಕ್ಷಕ್ಕೆ ಏರಿಕೆ; ತೆರಿಗೆದಾರರಿಗೆ ಮಾಹಿತಿ ನೀಡಬೇಕಾದ ಒತ್ತಡ ಕಡಿಮೆ ಮಾಡಲು ಪ್ರಯತ್; ಸರಳವಾಗಿ ವಹಿವಾಟು ನಡೆಸಲು ಅವಕಾಶ; ಉದ್ಯೋಗ ಮತ್ತು ಹೂಡಿಕೆಗಳನ್ನು ಗಮನದಲ್ಲಿರಿಸಿಕೊಳ್ಳುವ ಪ್ರಯತ್ನ