ವಾಮಾಚಾರದ ಹೆಸರಿನಲ್ಲಿ ವಂಚನೆ; ದೂರು ದಾಖಲಿಸಿದ ಮಹಿಳೆ

Most read



ಬೆಂಗಳೂರು: ವಾಮಾಚಾರದ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ ರೂ. 80 ಸಾವಿರ ರೂ ಲಪಟಾಯಿಸಿರುವ ಪ್ರಕರಣ ಸಂಬಂಧ ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ 29 ವರ್ಷದ ಮಹಿಳೆ ನೀಡಿರುವ ದೂರಿನ ಆಧಾರದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರ ಮಹಿಳೆಯ ವಾಟ್ಸ್ಆ್ಯಪ್‌ಗೆ ಕಳೆದ ವಾರ ಅಪರಿಚಿತ ನಂಬರ್‌ನಿಂದ ಹಲೋ ಫ್ರೆಂಡ್ ಎಂಬ ಸಂದೇಶ ಬಂದಿದೆ. ಇದಕ್ಕೆ ಮಹಿಳೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ಬಾಲ್ಯದಿಂದಲೂ ನಿಮ್ಮ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಪ್ರಯೋಗವಾಗಿದೆ. ಅದು ನಿಮ್ಮ ಪತಿಯ ಮೇಲೂ ಪ್ರಯೋಗವಾಗುತ್ತಿದೆ ಎಂದು ಆತ  ಹೆದರಿಸಿದ್ದಾನೆ. ನಿಮ್ಮ ಮೇಲೆ ನಡೆದಿರುವ ವಾಮಾಚಾರವನ್ನು ಬಗೆಹರಿಸಲು ಹಣ ಕೊಡಬೇಕು ಎಂದು ಕೇಳಿದ್ದಾನೆ. ವಾಮಾಚಾರದ ಮಾತಿಗೆ ಹೆದರಿದ ಮಹಿಳೆ ಆರೋಪಿಯ ಖಾತೆಗೆ  ರೂ. 80 ಸಾವಿರ ಹಣವನ್ನು ವರ್ಗಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ಆರೋಪಿ ಮತ್ತೆ ಸಂಪರ್ಕಕ್ಕೆ ಪ್ರಯತ್ನ ನಡೆಸಿದ್ದಾನೆ. ತಾನು ಮೋಸ ಹೋಗಿರುವುದು ಅರಿವಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article