ಆಯುಕ್ತರ ನಕಲಿ ಸಹಿ ನಕಲು ಮಾಡಿ 35 ಲಕ್ಷ ರೂ ವಿತ್‌ ಡ್ರಾ ಮಾಡಿಕೊಂಡ ಪಿಎ ; ಐವರು ಆರೋಪಿಗಳ ಬಂಧನ

Most read

ಕಲಬುರಗಿ: ಕಲಬುರಗಿ ನಗರ ಪಾಲಿಕೆ ಆಯುಕ್ತರ ಸಹಿ ನಕಲು ಮಾಡಿ ಬ್ಯಾಂಕ್‌ ನಿಂದ ಹಣ ಡ್ರಾ ಮಾಡಿಕೊಂಡ ಪ್ರಕರಣದಲ್ಲಿ  ಪಾಲಿಕೆ ಆಯುಕ್ತರ ಆಪ್ತ ಸಹಾಯಕ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಪ್ತ ಸಹಾಯಕ ಮೊಹಮ್ಮದ್​​​ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮಿರ್ಜಾ ಬೇಗ್, ನಸೀರ್ ಅಹ್ಮದ್ ಮತ್ತು ಮೊಹಮ್ಮದ್​​​​​ ರೆಹಮಾನ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 30 ಲಕ್ಷ ರೂ. ಹಣ ಜಪ್ತಿ ಮಾಡಿಕೊಂಡಿದ್ದು, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೆಕ್​ಬುಕ್​ನಲ್ಲಿ ಆಯುಕ್ತರ ನಕಲಿ ಸಹಿ ಮಾಡಿ ಬ್ಯಾಂಕ್​ಗೆ 1 ಕೋಟಿ 32 ಲಕ್ಷ ರೂ. ಹಣ ವಿತ್​ ಡ್ರಾ ಮಾಡಿಕೊಳ್ಳಲು 3 ಚೆಕ್​​​ಗಳನ್ನು ಆರೋಪಿಗಳು ಬ್ಯಾಂಕ್ ಗೆ ಕಳಿಸಿದ್ದರು. ಒಂದು ಚೆಕ್​ ನೀಡಿ 35,56,640 ರೂ. ಹಣ ಡ್ರಾ ಮಾಡಿಕೊಂಡಿದ್ದರು. ಬಳಿಕ ಮತ್ತೆರಡು ಚೆಕ್​​ಗಳನ್ನು ಡ್ರಾಗೆ ಕಳುಹಿಸಿದ್ದರು. ಅನುಮಾನಗೊಂಡ ಬ್ಯಾಂಕ್‌ ಸಿಬ್ಬಂದಿ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

More articles

Latest article