ಆಸ್ಪತ್ರೆಯಿಂದ ಪತ್ನಿ ಮನೆಗೆ ತೆರಳಿದ ಚಿತ್ರನಟ ದರ್ಶನ್

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರರಣದ ಅರೋಪಿ ನಂ-2 ಆಗಿರುವ ಚಿತ್ರನಟ ದರ್ಶನ್ ತೂಗುದೀಪ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಆದರೆ ಅವರು ರಾಜರಾಜೇಶ್ವರಿ ನಗರದ ತಮ್ಮ ಮನೆಗೆ ತೆರಳದೆ ಪತ್ನಿ ವಿಜಯಲಕ್ಷ್ಮಿ ಅವರ ಫ್ಲಾಟ್‌ಗೆ ತೆರಳಿದ್ದಾರೆ.
ಅವರು ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲೇಬೇಕು. ಇಲ್ಲವಾದಲ್ಲಿ ಪಾರ್ಶ್ವ ವಾಯು ರೋಗಕ್ಕೆ ತುತ್ತಾಗಬೇಕಾಗುತ್ತದೆ ಎಂದು ಏಳು ವಾರಗಳ ಹಿಂದೆ ಹೈಕೋರ್ಟ್‌ ನಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ ದರ್ಶನ್‌ ಯಾವುದೇ ಆಪರೇಷನ್‌ ಗೆ ಒಳಗಾಗಿರಲಿಲ್ಲ. ನಂತರ ಹೈಕೋರ್ಟ್‌ ನಲ್ಲಿ ಅವರಿಗೆ ರೆಗ್ಯುಲರ್‌ ಜಾಮೀನು ಲಭ್ಯವಾಗಿತ್ತು. ಈ ಜಾಮೀನು ಸಿಕ್ಕ ನಂತರವೂ ಅವರು ಎರಡು ದಿನ ಆಸ್ಪತ್ರೆಯಲ್ಲಿದ್ದು ಇಂದು ಹೊಸಕೆರೆಹಳ್ಳಿಯ ಪತ್ನಿಯ ಅಪಾರ್ಟ್‌ ಮೆಂಟ್‌ ಗೆ ತೆರಳಿದ್ದಾರೆ.

ಆಸ್ಪತ್ರೆಯಿಂದ ಮಗನ ಆಸರೆ ಪಡೆದು ದರ್ಶನ್ ಕಾರು ಏರಿದ್ದಾರೆ. ಬೆನ್ನು ನೋವಿಗೆ ಅಕ್ಟೋಬರ್ 31 ರಿಂದ ದರ್ಶನ್ ಫಿಸಿಯೋ ಥೆರಪಿ ಚಿಕಿತ್ಸೆ ಪಡೆಯುತ್ತಿದ್ದರು. ಲಭ್ಯ ಮಾಹಿತಿಗಳ ಪ್ರಕಾರ ಅವರು ಪತ್ನಿಯೊಂದಿಗೆ ಹೊಸಕೆರೆಹಳ್ಳಿ ಫ್ಲಾಟ್ನಲ್ಲಿಯೇ ಉಳಿಯಲಿದ್ದಾರೆ. ಪತ್ನಿಗೆ ಮನೆಯಲ್ಲೇ ಎಲ್ಲ ರೀತಿಯ ಚಿಕಿತ್ಸೆ ನೀಡಲು ವಿಜಯಲಕ್ಷ್ಮಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮನೆಯಲ್ಲೇ ದರ್ಶನ್‌ಗೆ ಫಿಸಿಯೋಥೆರಪಿ ನೀಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ವಿಜಯಲಕ್ಷ್ಮಿ ಅವರ ನಿವಾಸದ ಬಳಿಯೂ ದರ್ಶನ್‌ ಅಭಿಮಾನಿಗಳು ಜಮಾಯಿಸಿದ್ದಾರೆ.

More articles

Latest article