ನಶೆ ಮುಕ್ತ ಕರ್ನಾಟಕ ಆ್ಯಪ್ ಬಳಸಿ; ಡ್ರಗ್ಸ್ ಕುರಿತು ಮಾಹಿತಿ ನೀಡಿ

Most read

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುವಿನ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯು ‘ನಶೆ ಮುಕ್ತ ಕರ್ನಾಟಕ’ ಮೊಬೈಲ್ ಆ್ಯಪ್‌ನ ಅಭಿವೃದ್ಧಿಪಡಿಸಿದೆ.
ಮಾದಕ ವಸ್ತುವಿನ ದಂಧೆಗೆ ಕಡಿವಾಣ ಹಾಕಲು ಆ್ಯಪ್‌ನಲ್ಲಿ ಸಾರ್ವಜನಿಕರು ಮಾದಕ ಬೆಳೆಯನ್ನು ಬೆಳೆಯುತ್ತಿರುವ ಬೆಳೆಗಾರರು, ಅದನ್ನು ಮಾರಾಟ ಮಾಡುತ್ತಿರುವ ಮಾರಾಟಗಾರರು, ಬಳಸುತ್ತಿರುವ ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ಗಳನ್ನು ತಯಾರಿಸುತ್ತಿರುವ ಲ್ಯಾಬ್‌ಗಳು, ಅದನ್ನು ಸಂಗ್ರಹಣೆ ಮಾಡುತ್ತಿರುವ ಸಂಗ್ರಹಕಾರರು, ಸಾಗಾಣಿಕೆ ಮಾಡುತ್ತಿರುವ ಸಾರಿಗೆ ವ್ಯವಸ್ಥೆ, ಇತ್ಯಾದಿ, ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಲಭ್ಯವಿದ್ದೇ ಇರುತ್ತದೆ. ಅದನ್ನು ಪೊಲೀಸರಿಗೆ ಗೌಪ್ಯವಾಗಿ ಹಂಚಿಕೊಳ್ಳಲು ‘ನಶೆ ಮುಕ್ತ ಕರ್ನಾಟಕ’ ಆ್ಯಪ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕರು ಮಾಡಬೇಕಿರುವುದಿಷ್ಟೇ. ಗೂಗಲ್ ಪ್ಲೇ ಸ್ಟೋರ್ನಿಂದ ಈ ಆ್ಯಪ್ನ್ನು ತಮ್ಮ ಮೊಬೈಲ್ನಲ್ಲಿ ಅಳವಡಿಸಿಕೊಂಡ ಬಳಿಕ ಅದರಲ್ಲಿ ಮಾದಕ ವಸ್ತುವಿನ ಕುರಿತಾಗಿ ಇಂಗ್ಲೀಷ್ ಅಥವಾ ಕನ್ನಡದಲ್ಲಿ ವರದಿ ಮಾಡಬಹುದಾಗಿರುತ್ತದೆ. ಅವರು ಹಂಚಿಕೊAಡ ಮಾಹಿತಿಯ ಲೋಕೇಷನ್ನ್ನು ಸ್ಥಳೀಯ ಪೊಲೀಸರು, ಘಟಕಾಧಿಕಾರಿಗಳಾದ ಡಿಸಿಪಿ/ಎಸ್ಪಿ ಹಾಗೂ ಉಸ್ತುವಾರಿ ಮೇಲಾಧಿಕಾರಿಗಳಿಗೆ ಹಂಚಿಕೊಳ್ಳಲಾಗುತ್ತದೆ. ಮಾಹಿತಿ ಪಡೆದ ಅಧಿಕಾರಿಯು
ಆ ಮಾಹಿತಿಯ ನೈಜತೆ ಖಾತ್ರಿಪಡಿಸಿಕೊಂಡು ದಾಳಿ ಮಾಡಲು ಅನುವು ಮಾಡಿಕೊಡಲಾಗಿದೆ.

ಈ ಆ್ಯಪ್ನಲ್ಲಿ ಲಭ್ಯವಿರುವ ಅಂಶಗಳು: ಮಾದಕ ವಸ್ತು ಮತ್ತು ನಿದ್ರಾಜನ್ಯ ಪದಾರ್ಥಗಳ ಕಾಯ್ದೆ, 1985 ಯಡಿ ಜರುಗುವ ಅಪರಾಧಗಳಿಗೆ ಶಿಕ್ಷೆಯ ಮಾಹಿತಿ, ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಮಾದಕ ವಸ್ತುವಿನ ದುಷ್ಪರಿಣಾಮಗಳು, ಸಾರ್ವಜನಿಕರು ಪೊಲೀಸರಿಗೆ ಮಾದಕ ವಸ್ತುವಿನ ಕಳ್ಳಸಾಗಾಣಿಕೆ, ಮಾದಕ ಬೆಳೆಯ ಕೃಷಿ, ಅವುಗಳ ಸಂಗ್ರಹಣೆ, ಮಾದಕ ವ್ಯಸನಿಗಳ ಕುರಿತಾದ ಮಾಹಿತಿ, ಮಾದಕ ವಸ್ತುವಿನ ತಯಾರಿಕಾ ಘಟಕಗಳ ಕುರಿತಾಗಿ ಗುಪ್ತ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಹಂಚಿಕೊಳ್ಳಬಹುದಾಗಿರುತ್ತದೆ.

More articles

Latest article