Thursday, December 5, 2024

16 ವರ್ಷದ ಬಾಲಕನ ಮದುವೆಯಾದ 25 ವರ್ಷದ ಶಿಕ್ಷಕಿ

Most read

ಮೀರತ್: 25 ವರ್ಷದ ಶಿಕ್ಷಕಿಯೊಬ್ಬರು ಅಪ್ರಾಪ್ತ ವಯಸ್ಸಿನ ಬಾಲಕನನ್ನು ಪ್ರೀತಿಸಿ ವಿವಾಹವಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಉತ್ತರಾಖಂಡದ ರಾಜಧಾನಿ ಹ್ರಾಡೂನ್‌ನ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ 25 ವರ್ಷದ ಶಿಕ್ಷಕಿಯೊಬ್ಬರಿಗೆ ಫೇಸ್‌ ಬುಕ್ ಮೂಲಕ ಕೆಲವು ದಿನಗಳ ಹಿಂದೆ ಮೀರತ್‌ನ 16 ವರ್ಷದ ಬಾಲಕನ ಪರಿಚಯವಾಗಿತ್ತು. ಬಳಿಕ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಇತ್ತೀಚೆಗೆ ಶಿಕ್ಷಕಿ ಮೀರತ್‌ಗೆ ಹೋಗಿ, ಬಾಲಕನ್ನು ಗಾಜಿಯಾಬಾದ್‌ಗೆ ಕರೆದುಕೊಂಡು ಬಂದಿದ್ದಾರೆ. ಗಾಜಿಯಾಬಾದ್‌ನಲ್ಲಿ ಬಾಲಕ ಮೇಜರ್ ಎಂಬಂತೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಕಚೇರಿಯಲ್ಲಿ ಮದುವೆಯನ್ನು ನೋಂದಣಿ ಮಾಡಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ ಶಿಕ್ಷಕಿಯು ತಮ್ಮ ಮಗನನ್ನು ಹೆದರಿಸಿ ಮದುವೆಯಾಗಿದ್ದಾರೆ ಮತ್ತು ತಮ್ಮ ಮಗ ಅಪ್ರಾಪ್ತನಾಗಿದ್ದರೂ ಮೇಜರ್ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.

ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಒಂದು ವೇಳೆ ಬಾಲಕ ಅಪ್ರಾಪ್ತನಾಗಿ ಬಾಲಕನ ಒಪ್ಪಿಗೆಯೊಂದಿಗೆ ವಿವಾಹ ನಡೆದಿದ್ದರೂ, ಅದಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ.

More articles

Latest article