ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್; ‘ಬ್ರಹ್ಮಗಂಟು’ ನಟಿ ಶೋಭಿತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಲೆಟರ್ ಪತ್ತೆ

Most read

ಶೋಭಿತಾಗೆ ಕನ್ನಡ ಚಿತ್ರರಂಗದ ಜೊತೆ ನಂಟು ಇತ್ತು. ‘ಎರಡೊಂದ್ಲಾ ಮೂರು’, ‘ಒಂದ್‌ ಕಥೆ ಹೇಳಾ’ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದರು. ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರು ನಿಧನ ಹೊಂದಿದ್ದಾರೆ. ಈಗ ಡೆತ್ನೋಟ್ ಸಿಕ್ಕಿದೆ.

ಹೈದರಾಬಾದ್‌: ಕನ್ನಡದ ಹಿರಿತೆರೆ ಮತ್ತು ಕಿರುತೆರೆ ನಟಿ ಶೋಭಿತಾ ಶಿವಣ್ಣ ಶನಿವಾರ ಹೈದರಾಬಾದದ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿರಲಿಲ್ಲ. ಮಹತ್ವದ ಬೆಳವಣಿಗೆಯೊಂದರಲ್ಲಿ ಅವರು ಬರದಿರುವ ಡೆತ್‌ ನೋಟ್‌ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು. ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ’ ಎಂದು ಡೆತ್‌ ನೋಟ್‌ ನಲ್ಲಿ ಬರೆಯಲಾಗಿದೆ. ಆದರೆ ಇದೊಂದು ಕೋಡ್‌ ವರ್ಡ್‌ ಅಥವಾ ಒಗಟಿನ ರೂಪದಲ್ಲಿದ್ದು ಇದರ ಅರ್ಥ ತಿಳಿದು ಬಂದಿಲ್ಲ. ಶೋಭಿತಾ ಅವರ ಪತಿ ಮತ್ತು ತವರು ಮನೆಯವರ ವಿಚಾರಣೆ ನಡೆಸಿದ ನಂತರ ಈ ಪದಗಳಿಗೆ ಅರ್ಥ ಸಿಗಬಹುದು. ಇವರ ನೆರೆ ಹೊರೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶೋಭಿತಾ ಸಾವಿಗೆ ಖಿನ್ನತೆ ಕಾರಣವೇ? ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಗಚ್ಚಿಬೌಲಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಶೋಭಿತಾ ಅವರು ವಿವಾಹವಾಗಿ ಕೇವಲ ಎರಡು ವರ್ಷಗಳಾಗಿದ್ದವು. ಹೈದರಾಬಾದ್‌ ಮೂಲದ ಉದ್ಯಮಿ ಸುಧೀರ್‌ ರೆಡ್ಡಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಬಂಧು ಮಿತ್ರರ ಸಮ್ಮುಖದಲ್ಲಿಯೇ ಮದುವೆಯಾಗಿದ್ದರು. ನಂತರ ಪತಿಯೊಂದಿಗೆ ಹೈದರಬಾದ್‌ ನಲ್ಲಿ ನೆಲೆಸಿದ್ದರು. ಇವರು ಹನ್ನೆರಡಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರೂ ಬ್ರಹ್ಮಗಂಟು ಧಾರಾವಾಹಿ ಇವರಿಗೆ ಹೆಸರು ತಂದುಕೊಟ್ಟಿತ್ತು. ಎರಡೊಂದ್ಲಾ ಮೂರು, ‘ಒಂದ್‌ ಕಥೆ ಹೇಳ್ಲಾʼ ಸೇರಿದಂತೆ ನಾಲ್ಕೈದು ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದರು. ಶೋಭಿತಾ ಮದುವೆ ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಿಂದ ದೂರ ಉಳಿದಿದ್ದರು. ಪತಿ ಸುಧೀರ್‌ ರೆಡ್ಡಿ ಗೋವಾಗೆ ತೆರಳಿದ್ದರು. ಪತಿ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಹೋದರಿಯೊಂದಿಗೆ ಮಾತನಾಡಿ ನನಗೆ ತುಂಬಾ ಖುಷಿಯಾಗಿದೆ. ಎರಡು ವಾರದ ನಂತರ ಊರಿಗೆ ಬರುತ್ತೇನೆ ಎಂದು ಹೇಳಿಕೊಂಡಿದ್ದರು. ಈಗಾಗಲೇ ಮರಣೋತ್ತರ ಪರೀಕ್ಷೆ ಮುಗಿದಿದ್ದು ಇಂದು ಸಂಜೆಯೊಳಗೆ ಶವವನ್ನು ಹಾಸನಕ್ಕೆ ತರಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

More articles

Latest article