ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆದು ತಮಿಳುನಾಡಿನ ಮೂಲಭೂತ ಹಕ್ಕುಗಳನ್ನು ಉಳಿಸಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಡಿಎಂಕೆ ಯುವ ಘಟಕದ ಎರಡನೇ ರಾಜ್ಯಮಟ್ಟದ ಸಮಾವೇಶ ನಡೆಯುವ ಸ್ಥಳವನ್ನು ಪರೀಶಿಲನೆ ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬಿಜೆಪಿ ಸರಕಾರವು ನೀಟ್ ಅನ್ನು ಜಾರಿಗೊಳಿಸಿದ ನಂತರ ನಾವು ನಮ್ಮ ಸಹೋದರಿ ಅನಿತಾ ಮತ್ತು ಸಹೋದರ ಧನುಷ್ ಅವರನ್ನು ಸೇಲಂನಲ್ಲಿ ಕಳೆದುಕೊಂಡಿದ್ದೇವೆ. ರಾಜ್ಯದ ತೆರಿಗೆ, ಶಿಕ್ಷಣ ಮತ್ತಿತರ ಹಕ್ಕುಗಳನ್ನು ಕೇಂದ್ರಸರ್ಕಾರ ಕಿತ್ತುಕೊಂಡಿದೆ ಎಂದರು.
ಮುಂದುವರೆದು, ಈ ಸಮಾವೇಶ ಯಶಸ್ವಿಯಾಗಿ ಮುಗಿದ ನಂತರ ನಮ್ಮ ನಾಯಕರ ನಿರ್ದೇಶನದಂತೆ ಚುನಾವಣಾ ಕಾರ್ಯ ಆರಂಭಿಸುತ್ತೇವೆ ಎಂದರು.