Friday, December 12, 2025

ನಮ್ಮ ವಂಶವೇ ಕಣ್ಣೀರು ಹಾಕುತ್ತದೆ:ಎಚ್‌ ಡಿಡಿ

Most read

ಚನ್ನಪಟ್ಟಣ  : ಚನ್ನಪಟ್ಟಣ  ಕ್ಷೇತ್ರದ ಎನ್‌ ಡಿಎ ಅಭ್ಯರ್ಥಿ  ನಿಖಿಲ್‌ ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮತ್ತೊಂದು ಕಡೆ ಅಭ್ಯರ್ಥಿ ನಿಖಿಲ್‌ ಕೂಡಾ ಗ್ರಾಮ ಗ್ರಾಮಗಳಿಗೆ ಬೇಟಿ ನೀಡುತ್ತಿದ್ದಾರೆ.

ಮಂಡ್ಯದ ಚಿನಕುರುಳಿ ಗ್ರಾಮದಲ್ಲಿ ಮಾತನಾಡಿರುವ ದೇವೇಗೌಡರು ನನ್ನ ಉಸಿರು ಇರುವ ತನಕ ರಾಜಕೀಯದಲ್ಲಿರುತ್ತೇನೆ. ಮೊಮ್ಮಗನಿಗಾಗಿ ನಾನು ಈಗ ರಾಜಕೀಯಕ್ಕೆ ಬಂದಿಲ್ಲ. ಒಂದು ಪ್ರಾದೇಶಿಕ ಪಕ್ಷ ಉಳಿಸಲು ನಾನು ಬಂದಿದ್ದೀನಿ. ಈ ಸರ್ಕಾರ ತೆಗೆಯುವವರೆಗೂ ನಿದ್ದೆ ಮಾಡಲ್ಲ.  ಮೊಮ್ಮಗ ನಿಖಿಲ್ ಗೆಲ್ಲುವವರೆಗೂ ಮಲಗುವುದಿಲ್ಲ. ನಿಖಿಲ್ ಗೆದ್ದ ಬಳಿಕ ಮನೆಯಲ್ಲಿ ಮಲಗುತ್ತೇನೆ. ದೇಶದಲ್ಲಿ ಮೋದಿಗೆ ಮಿಗಿಲಾದ ನಾಯಕ ಯಾರೂ ಇಲ್ಲ ಎಂದು ಹೊಗಳಿದ್ದಾರೆ.

ನಿಖಿಲ್ ಕಣ್ಣೀರನ್ನು ವ್ಯಂಗ್ಯವಾಡಿರುವ  ಕಾಂಗ್ರೆಸ್‌ ಮುಖಂಡರ ವಿರುದ್ಧ ಕಿಡಿ ಕಾರಿದ್ದಾರೆ. ಡಿ.ಕೆ. ಶಿವಕುಮಾರ್‌ ಕೊತ್ವಾಲ್ ಜೊತೆಗಿದ್ದ ಮನುಷ್ಯ.  ಡಿಕೆ ಕಣ್ಣೀರು ಹಾಕಿದ್ದನ್ನು  ಯಾವತ್ತಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದರು. ನಾನು, ಕುಮಾರಸ್ವಾಮಿ, ನಿಖಿಲ್ ಕಣ್ಣೀರು ಹಾಕಿದ್ದೇವೆ. ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನೀವು ಹಾಕ್ತೀರಾ..? ನಮ್ಮ ಅಪ್ಪನಿಂದಲೇ ಕಣ್ಣೀರು ಹಾಕೋದು ಬಂದಿದೆ ಎಂದು ಹೇಳಿದ್ದಾರೆ.

More articles

Latest article