ರಾಮನಗರ ಜಿಲ್ಲೆಯಲ್ಲಿ ನಾವು ಶಾಂತಿ ಕಾಪಾಡುವ ಕೆಲಸ ಮಾಡಿದ್ದೀವಿ : ನಿಖಿಲ್ ಕುಮಾರಸ್ವಾಮಿ

Most read

ನಾವು ಹಾಸನದಲ್ಲಿ ಹುಟ್ಟಿದ್ರು ಕೂಡ ರಾಮನಗರದ ಶಾಂತಿ ಕಾಪಾಡುವ ಕೆಲಸ ಮಾಡಿದೀವಿ ಎಂದು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಕೋಡಿಹೊಸಹಳ್ಳಿ ಗ್ರಾಮದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.

ರಾಜ್ಯದ ಉಪಮುಖ್ಯಮಂತ್ರಿಗಳು ಕುಮಾರಣ್ಣನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಸ್ವಭಾವಿಕವಾಗಿ ಅವರ ಹಿನ್ನಲೆ ಅವರ ಸಂಸ್ಕೃತಿ ಏನು ಅಂತ ತೋರಿಸುತ್ತದೆ. ಯಾವಾಗ್ಲೂ ಹೇಳ್ತಾರೆ ನಾವು ಹಾಸನ ಜಿಲ್ಲೆಯವರು, ರಾಮನಗರ ಜಿಲ್ಲೆಯವರಲ್ಲ ಎಂದು. ನಾವು ಹಾಸನದಲ್ಲಿ ಹುಟ್ಟಿದ್ರು ಕೂಡ ರಾಮನಗರದ ಶಾಂತಿ ಕಾಪಾಡುವ ಕೆಲಸ ಮಾಡಿದೀವಿ ಎಂದು ತೀಕ್ಷ್ಣವಾಗಿ ಉತ್ತರಿಸಿದರು.

ನಾವು ಸಾರ್ವಜನಿಕ ವೇದಿಕೆಯಲ್ಲಿ ಎಂದು ಕೂಡ ಏಕವಚನದಲ್ಲಿ, ಒಬ್ಬರನೊಬ್ಬರು ಕೀಳು ಮಟ್ಟದಲ್ಲಿ ಮಾತಾಡಿಲ್ಲ, ಮಾತನಾಡುವುದಿಲ್ಲ. ನಾವು ರಾಜಕೀಯವಾಗಿ ವಿರೋಧಿಸುತ್ತೇವೆ ವಿಷಯದಾರಿತ ಚರ್ಚೆ ಮಾಡುತ್ತೇವೆ. ನಾವು ದ್ವೇಷದ ರಾಜಕೀಯ ಮಾಡಿಲ್ಲ ಮಾಡೋದು ಇಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ನಮ್ಮ ಊರಿಗೆ ಬಸ್ ವ್ಯವಸ್ಥೆ ಇಲ್ಲ ಎಂದು ಗ್ರಾಮಸ್ಥರು ನಿಖಿಲ್ ಕುಮಾರಸ್ವಾಮಿ ಅವರ ಬಳಿ ಹೇಳಿಕೊಂಡರು.ಡಿಪೋ ಮ್ಯಾನೇಜರ್ ಮತ್ತು ಜಿಲ್ಲಾಧಿಕಾರಿ ಬಳಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು, ಚನ್ನಪಟ್ಟಣ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಜಯಮುತ್ತು ಅವರು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿಯ ಸ್ಥಳೀಯ ಪ್ರಮುಖ ಮುಖಂಡರು ಜತೆಯಲಿದ್ದರು.

More articles

Latest article