ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

ಬೆಂಗಳೂರು: ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಮಂಗಲದಲ್ಲಿ ನಿರ್ಮಣ ಹಂತದ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ೫ ವರ್ಷದ ಮಗು ಬಿದ್ದು ಅಸು ನೀಗಿದೆ. ಮೃತ ಬಾಲಕನನ್ನು ಸುಹಾಸ್ ಗೌಡ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ನೀಡಿದ ದೂರಿನ ಆಧಾರದಲ್ಲಿ ಕಟ್ಟಡ ಮಾಲೀಕ ಹಾಗೂ ಕಟ್ಟಡ ನಿರ್ಮಣದ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬುವರ ಮೇಲೆ FIR ದಾಖಲಿಸಲಾಗಿದೆ. ಸುಹಾಸ್ ಶ್ರೀಕನ್ಯಾ ಮತ್ತು ಮುನಿರಾಜು ದಂಪತಿ ಪುತ್ರ ಎಂದು ತಿಳಿದು ಬಂದಿದೆ.

ಕನ್ನಮಂಗಲ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಮಿಲ್ಕ್ ಡೇರಿ ಕಾಮಗಾರಿ ನಡೆಯುತ್ತಿತ್ತು. ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ೫ ಅಡಿ ಆಳ ಮತ್ತು ಅಗಲದ ಗುಂಡಿ ತೋಡಲಾಗಿತ್ತು. ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿತ್ತು. ಗುಂಡಿಯ ಸುತ್ತಮುತ್ತ ಸುರಕ್ಷಿತ ಕ್ರಮ ಅನುಸರಿಸಿರಲಿಲ್ಲ. ಅಲ್ಲಿ ಆಟವಾಡುತ್ತಿದ್ದ ಮಗು ಸುಹಾಸ್ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಟ್ಟಡವನ್ನು ಸೊಣ್ಣಪ್ಪ ಎಂಬುವರು ಕಟ್ಟುತ್ತಿದ್ದರು.

More articles

Latest article

Most read