ಭರ್ಜರಿ ರೋಡ್ ಶೋ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ

ವಯನಾಡ್(ಕೇರಳ): ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ನಡುವೆ ನಾಮಪತ್ರ ಸಲ್ಲಿಸಿದರು.

ಭರ್ಜರಿ ರೋಡ್ ಶೋ ಮೂಲಕ ಆಗಮಿಸಿದ ಅವರು
ಚುನಾವಣಾ ಅಖಾಡ ಪ್ರವೇಶಿಸಿದ್ದಾರೆ.

ಮಂಗಳವಾರ ರಾತ್ರಿಯೇ ಕಾಲಪೆಟ್ಟಾಗೆ ಆಗಮಿಸಿದ ಪ್ರಿಯಾಂಕಾ ಅವರಿಗೆ ಯುಡಿಎಫ್ ಸದಸ್ಯರು ಮತ್ತು ಸಾವಿರಾರು ಕಾರ್ಯಕರ್ತರುಭರ್ಜರಿ ಸ್ವಾಗತ ನೀಡಿದರು. ಇಂದು ಪಕ್ಷದ ಮಾಜಿ ಅಧ್ಯಕ್ಷೆ, ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪತಿ ರಾಬರ್ಟ್ ವಾದ್ರಾ ಜೊತೆ ತೆರೆದ ವಾಹನದಲ್ಲಿ ಪ್ರಿಯಾಂಕಾ ಭರ್ಜರಿ ರೋಡ್ ಶೋ ನಡೆಸಿದರು.

ಪಕ್ಷದ ಹಿರಿಯ ಮುಖಂಡರು ಹಾಗೂ ಅಖಾಡ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐಯುಎಂಎಲ್ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೆರೆರಿದ್ದ ಜನರತ್ತ ಕೈಬಿಸಿ ಸಾಗಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಯುಡಿಎಫ್ ಬೆಂಬಲಿಸುವ ಹೆಡ್‌ಬ್ಯಾಂಡ್ ಧರಿಸಿದ್ದ ಬಾಲಕಿಯನ್ನು ಕರೆದು ವಾಹನಕ್ಕೆ ಹತ್ತಿಸಿಕೊಂಡಿದ್ದು ವಿಶೇಷವಾಗಿತ್ತು.

More articles

Latest article

Most read