ರಾಜ್ಯ ರಾಜಕೀಯದಲ್ಲಿ ಗಂಟೆ ಗಂಟೆಗೂ ರಾಜಕೀಯ ಬದಲಾಗುತ್ತಿರುತ್ತದೆ. ನಿನ್ನೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಸಿಪಿ ಯೋಗೇಶ್ವರ್ ಇವತ್ತು ಬೆಳಗ್ಗೆಯೇ ಶಿವಕುಮಾರ್ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕೃತವಾಗಿ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಡಿಕೆ ಶಿವಕುಮಾರ್, ಸಿಪಿ ಯೋಗೇಶ್ವರ್ ಅವರು ಅಧಿಕೃತವಾಗಿ ನಮ್ಮ ಪಕ್ಷದ ಸದಸ್ಯತ್ವವನ್ನು ತೆಗೆದುಕೊಂಡು. ನಮ್ಮ ಪಕ್ಷದ ಕೆಲವು ನಿಯಮಗಳ ಪ್ರಕಾರ ಅವರು ಅರ್ಜಿ ಸಹ ಸಲ್ಲಿಸಿದ್ದಾರೆ. ಸಿಪಿ ಯೋಗೇಶ್ವರ್ ಸೇರ್ಪಡೆ ಒಂದೇ ಕಾರಣಕ್ಕೆ ವಯನಾಡ್ ಪ್ರವಾಸ ಕೈಬಿಟ್ಟು ನಾನು ಸಿಎಂ ಇಬ್ಬರು ಇಲ್ಲೇ ಇದ್ದೇವೆ ಎಂದು ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಈ ಮೊದಲು ಕಾಂಗ್ರೆಸ್ ನಲ್ಲೇ ಇದ್ದವರು ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ವಾಪಸ್ ಬಂದಿರುವುದು ಖುಷಿ ತಂದಿದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿಪಿ ಯೋಗೇಶ್ವರ್ ಮೂರು ಪಕ್ಷಗಳ ರಾಜಕೀಯವನ್ನು ನೋಡಿದ್ದಾರೆ. ಭಿನ್ನಾಭಿಪ್ರಾಯ ನಡುವೆ ಅವರು ಕಾಂಗ್ರೆಸ್ ನಿಂದ ವಾಪಸ್ ಹೋಗಿದ್ದರು ಈಗ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬಂದಿರೋದು ಚನ್ನಪಟ್ಟಣ ಕ್ಷೇತ್ರ ಸಂಘಟನೆಗೆ ಮತ್ತೊಂದು ಶಕ್ತಿ ಬಂದಿದೆ ಎಂದಿದ್ದಾರೆ.
ಸತತವಾಗಿ ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದೇನೆ. ಎಲ್ಲಾ ಕಾಂಗ್ರೆಸ್ ಶಾಸಕರು ನಾಯಕರು ಚನ್ನಪಟ್ಟಣ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಪಕ್ಷದ ಹಲವು ನಾಯಕರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುತ್ತಿದ್ದಾರೆ. ಈಗ ಸಿಪಿ ಯೋಗೇಶ್ವರ್ ಬಂದಿರೋದು ಚನ್ನಪಟ್ಟಣ ಚುನಾವಣೆ ಗೆದ್ದು ಇನ್ನಷ್ಟು ಕೆಲಸ ಮಾಡೊದು. ನೀವೆಲ್ಲರೂ ಒಟ್ಟಿಗೆ ಇದ್ದು ಕೆಲಸ ಮಾಡಿ. ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಗೆ ಮತ್ತೆ ಸ್ವಾಗತ ಎಂದು ಈ ಮೂಲಕ ಹೇಳಿ ಬರಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಾಜಿ ಸಚಿವ, ಬಿಜೆಪಿ ಮುಖಂಡ ಸಿ ಪಿ ಯೋಗೇಶ್ವರ್ ಅವರು ಪಕ್ಷ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಾ. ಎಂ ಸಿ ಸುಧಾಕರ್, ಮಾಜಿ ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ. ಜಿ.ಸಿ. ಚಂದ್ರಶೇಖರ್, ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಶಾಸಕರಾದ ಮಾಗಡಿ ಬಾಲಕೃಷ್ಣ, ಡಾ ರಂಗನಾಥ್, ಕದಲೂರು ಉದಯ್, ರವಿ ಗಣಿಗ, ಪೊನ್ನಣ್ಣ, ಎಂಎಲ್ಸಿಗಳಾದ ಪುಟ್ಟಣ್ಣ, ನಜೀರ್ ಅಹ್ಮದ್, ದಿನೇಶ್ ಗೂಳಿಗೌಡ, ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತೀಕ್, ಮತ್ತಿತರರು ಉಪಸ್ಥಿತರಿದ್ದರು.