ಬೆಂಗಳೂರು ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದಲ್ಲಿ ಕಳೆದ 72 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಯಲ್ಲಿ ಹೆಚ್ಚು ನೀರು ಹರಿದು ರಾಜಕಾಲುವೆಗಳಿಗೆ ಬರುತ್ತಿರುವ ಕಾರಣ ವಿವಿಧ ಪ್ರದೇಶಗಳು ಜಲಾವೃತವಾಗಿರುತ್ತದೆ. ಚೌಡೇಶ್ವರಿ ನಗರದಲ್ಲಿ 160 ಎಂ.ಎಂ ಮಳೆಯಾಗಿದ್ದು, ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿರುತ್ತದೆ.
ಬೆಂಗಳೂರುಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಎಂಎಂ ಮಳೆಯಾಗಿದ್ದು, ಇದು ಅತಿ ಹೆಚ್ಚು ಮೆಳೆಯಾಗಿರುವ ಪೈಕಿ ನಾಲ್ಕನೇ ಮಳೆಯಾಗಿದೆ. ನಗರದಲ್ಲಿ ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ಮೂರು-ನಾಲ್ಕು ದಿನಗಳಿಂದ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಪಾಲಿಕೆ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಅಗ್ನಿ ಶಾಮಕ ದಳದ ತಂಡಗಳು 24/7 ಕಾರ್ಯನಿರ್ವಹಿಸುತ್ತಿವೆ.
ಕೆಲವು ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಿದ್ದು, ಆ ವಿವರ ವಲಯವಾರು ವಿವರ ಹೀಗಿದೆ. ಯಲಹಂಕ ವಲಯ: ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್, ರಮಣಶ್ರೀ ಕ್ಯಾಲಿಫೋರ್ನಿಯಾ, ಚಿತ್ರಕೂಟ ಅಪಾರ್ಟ್ಮೆಂಟ್ ಟಾಟಾ ನಗರ್, ಭದ್ರಪ್ಪ ಲೇಔಟ್, ಬಾಲಾಜಿ ಲೇಔಟ್, ಸುರಭಿ ಲೇಔಟ್, ಸೋಮೇಶ್ವರ ಬಡಾವಣೆ, ತಿಂಡ್ಲು ರಸ್ತೆಯ ಬಸವ ಸಮಿತಿ, ಟಾಟಾ ನಗರ, ಚಿಕ್ಕ ಬೊಮ್ಮಸಂದ್ರ, ಆಂಜನೇಯ ಲೇಔಟ್, ವಾಯುನಂದನ ಲೇಔಟ್, ಫಾತಿಮ ಲೇಔಟ್, ಎಂಎಸ್ ಪಾಳ್ಯ, ಯರ‍್ರಪ್ಪ ಗಾರ್ಡನ್ ಮತ್ತು ಅಂಬೇಡ್ಕರ್ ಕಾಲೋನಿ ಮಹದೇವಪುರ ವಲಯ: ಸಾಯಿ ಬಾಬಾ ಲೇಔಟ್, ವಡ್ಡರ ಪಾಳ್ಯ, ಹೊರಮಾವು, ಮಾರತಹಳ್ಳಿ,ಆರ್.ಬಿ.ಡೈ ರೈನ್ ಬೋ ಕೊತ್ತನೂರು-ಬಾಲಾಜಿ ಲೇಔಟ್, ವಿಪ್ರೋ ಪ್ರದೇಶ- ಸರ್ಜಾಪುರ ರಸ್ತೆ. ದಾಸರಹಳ್ಳಿ ವಲಯ: ನಿಸರ್ಗ ಲೇಔಟ್, ಸಪ್ತಗಿರಿ ಲೇಔಟ್, ಪಾರ್ವತಿ ಲೇಔಟ್, ಮಿತ್ರಾ ಲೇಔಟ್, ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಬೆಲ್‌ಮಾರ್ಗ್ ಲೇಔಟ್.
ಮಳೆಯಿಂದಾಗಿ ಉಂಟಾಗಿರುವ ಪ್ರಮುಖ ಸಮಸ್ಯೆಗಳು ಈಗಿವೆ.
- ನೀರು ನುಗ್ಗಿರುವ ಮನೆಗಳ ಸಂಖ್ಯೆ: 1079
- ನೀರು ನಿಂತಿರುವ ಪ್ರದೇಶಗಳ ಸಂಖ್ಯೆ: 30
- ಮರ ಹಾಗೂ ರೆಂಬೆ-ಕೊಂಬೆಗಳು ಬಿದ್ದಿರುವ ಸಂಖ್ಯೆ: 199 ಸಮಸ್ಯೆಯನ್ನು ಬಗೆಹರಿಸಲು ವಿವಿಧ ತಂಡಗಳನ್ನು ನಿಯೋಜಿಸಲಾಗಿರುತ್ತದೆ. ಪ್ರಮುಖವಾದವುಗಳೆಂದರೆ ಅರಣ್ಯ ವಿಭಾಗ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ತಂಡಗಳು, ಅಗ್ನಿ ಶಾಮಕ ದಳ, ಪಾಲಿಕೆ ಅಧಿಕಾರಿ/ಸಿಬ್ಬಂದಿಗಳು, 16 ಬೋಟ್‌ಗಳು, ನೀರು ಹೊರ ಹಾಕಲು 25 ಪಂಪ್ ಸೆಟ್‌ಗಳು, 30 ಜೆಸಿಬಿಗಳು ಕಾರ್ಯಾಚರಣೆ ನಡೆಸುತ್ತಿವೆ.
- ಕೇಂದ್ರೀಯ ವಿಹಾರದಲ್ಲಿ 600 ಕುಟುಂಬಸ್ಥರ 2500 ನಿವಾಸಿಗಳಿಗೆ ಸ್ಥಳಾಂತರಿಸಲಾಗಿದೆ. 5 ಲೀಟರ್ ಸಾಮರ್ಥ್ಯದ 3500 ಬಾಟೆಲ್‌ಗಳನ್ನು ಹಂಚಿಕೆ ಮಾಡಲಾಗಿರುತ್ತದೆ. 1000 ಲೀಟರ್ ಹಾಲು ಹಾಗೂ 2000 ಬಿಸ್ಕೆಟ್ ಪ್ಯಾಕೆಟ್ ವಿತರಿಸಲಾಗಿರುತ್ತದೆ. 1000 ತಿಂಡಿ ಪ್ಯಾಕೆಟ್,6600 ಊಟದ ಪ್ಯಾಕೆಟ್ ವಿತರಿಸಲಾಗಿರುತ್ತದೆ. ಯಲಹಂಕ ವಲಯದ 4 ಪ್ರದೇಶಗಳನ್ನು ಹೊರತುಪಡಿಸಿ ಬೆರೆಡೆ ಸಮಸ್ಯೆಯನ್ನು ಬಗೆಹರಿಸಲಾಗಿರುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.