ಮೈಸೂರು ದಸರಾ ಗೋಲ್ಡ್​ ಪಾಸ್ ವಿತರಣೆ ಆರಂಭ: ಎಷ್ಟು ದರ? ಪಡೆಯುವುದು ಹೇಗೆ?

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ -2024ರ ಟಿಕೆಟ್​ ಮಾರಾಟ ಸೆ.28ರಿಂದ ಆರಂಭವಾಗಲಿದೆ. ಗೋಲ್ಡ್​ ಪಾಸ್ ಮತ್ತು ಸಾಮಾನ್ಯ ಟಿಕೆಟ್​​. ಈ ಎರಡವುಗಳನ್ನು ಆನ್​ಲೈನ್ ಮೂಲಕ ಕೊಂಡುಕೊಳ್ಳಬಹುದಾಗಿದೆ.

ಸೆಪ್ಟೆಂಬರ್​ 30ರವರೆಗೆ ಮಾತ್ರ ಗೋಲ್ಡ್​ ಪಾಸ್ ಮತ್ತು ಟಿಕೆಟ್ ​ಮಾರಾಟ ಮಾಡಲಾಗುತ್ತದೆ ಎಂದು ದಸರಾ ವಿಶೇಷ ಅಧಿಕಾರಿ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮಾಹಿತಿ ನೀಡಿದರು.

ಒಂದು ದಸರಾ ಗೋಲ್ಡ್ ಪಾಸ್‌ಗೆ 6,500 ರೂಪಾಯಿ ನಿಗದಿ ಮಾಡಲಾಗಿದೆ. ಒಂದು ದಸರಾ ಗೋಲ್ಡ್ ಪಾಸ್‌ನಲ್ಲಿ ಜಂಬೂಸವಾರಿ ಮೆರವಣಿಗೆ, ಪಂಜಿ‌ನ ಕವಾಯತು, ಚಾಮುಂಡಿಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ 3,500 ರೂ. ಬೆಲೆಯ ಟಿಕೆಟ್​ ಲಭ್ಯವಿದೆ. ಇನ್ನು, ಕೇವಲ ಪಂಜಿನ ಕವಾಯತು ವೀಕ್ಷಣೆಗೆ 1,000 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ.

ಮೈಸೂರು ದಸರಾ ಅಧಿಕೃತ ವೆಬ್​ಸೈಟ್ https://www.mysoredasara.gov.in ಗೆ ಭೇಟಿ ನೀಡಿ.

More articles

Latest article

Most read