ಕೊಲೆ ಆರೋಪಿಗೆ ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಸ್ಥಾನ: ತೀವ್ರ ವಿರೋಧದ ಬೆನ್ನಲ್ಲೇ ಅಧ್ಯಕ್ಷ ಎಂ.ಬಿ. ಕುಮಾರ್ ವಜಾ

Most read

ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿ ರೌಡಿಶೀಟರ್ ದೀಪು ಕೊಲೆ ಕೇಸ್​ನ 24ನೇ ಆರೋಪಿ ಎಂ.ಬಿ.ಕುಮಾರ್ ಆಯ್ಕೆ ಆಗಿದ್ದರು. ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆ ಈಗ ಶ್ರೀರಂಗಪಟ್ಟಣ ಕಸಾಪ ತಾಲ್ಲೂಕು ಅಧ್ಯಕ್ಷರನ್ನು ಪದವಿಯಿಂದ ವಜಾಗೊಳಿಸಲಾಗಿದೆ.

ಶಾಸಕರ ಒತ್ತಡಕ್ಕೆ ಮಣಿದು ಎಂ.ಬಿ.ಕುಮಾರ್​ಗೆ ಕಸಾಪ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎನ್ನಲಾಗಿತ್ತು. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ನಡೆಗೆ ಸಾಹಿತ್ಯಾಸಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾದ ಹಿನ್ನಲೆ ಎಂ.ಬಿ.ಕುಮಾರ್ ಆಯ್ಕೆ ಅನ್ನು ವಜಾಗೊಳಿಸಿದೆ.

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಿಸೆಂಬರ್‌ನಲ್ಲಿ ನಡೆಯುವ ನುಡಿಜಾತ್ರೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ನಡುವೆ ಕೊಲೆ ಆರೋಪಿಗೆ‌ ಅಧ್ಯಕ್ಷ ಸ್ಥಾನ ನೀಡಿ ಕಸಾಪ ಎಡವಟ್ಟು ಮಾಡಿಕೊಂಡಿತ್ತು.

2015ರ ಜನವರಿ 3ರಂದು ರೌಡಿಶೀಟರ್ ದೀಪು ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಎಂ.ಬಿ.ಕುಮಾರ್ 24ನೇ ಆರೋಪಿಯಾಗಿದ್ದರು. ಸದ್ಯ ಜಾಮೀನಿನ ಮೇಲೆ ಹೊರಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.

More articles

Latest article