ಮಂಗಳೂರು : ದೇಶದ ಪ್ರಮುಖ ರಾಜಕೀಯ ದ್ರಷ್ಟಾರರೂ ಮಹಾನ್ ಮುತ್ಸದ್ದಿಯೂ ಆದ ಸೀತಾರಾಮ್ ಯೆಚೂರಿಯವರು ಅಸು ನೀಗಿದ ಸುದ್ದಿ ತಿಳಿದು ದೇಶದ ಸಾಂಸ್ಕೃತಿಕ ಜಗತ್ತು ದು:ಖ ಪಡುತ್ತಿದೆ. ಅವರ ಕ್ರಿಯಾಶೀಲ ಹಾಗೂ ಸೈದ್ಧಾಂತಿಕ ವಿವರಣೆ-ವಿಶ್ಲೇಷಣೆಗಳು ಸದ್ಯದ ಹತಾಶೆಯ ಕಾಲಘಟ್ಟದಲ್ಲೂ ಪ್ರಗತಿಪರ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಳುವಳಿಗೆ ಬೆಳಕು ಬೀರಿ ಮುನ್ನಡೆಸ ಬಲ್ಲವಾಗಿದ್ದವು. ಭಾರತದ ಸಾಂಸ್ಕೃತಿಕ ಜಗತ್ತಿಗೆ ಅಂಥ ಬೆಳಕು ಇನ್ನಿಲ್ಲವಾಗಿದೆ.
ಕರ್ನಾಟಕದಲ್ಲೂ “ಸಮುದಾಯ” ಸಾಂಸ್ಕೃತಿಕ ಸಂಘಟನೆಯ ನಾವು ಕೂಡಾ ಅವರೊಂದಿಗಿನ ಸಂವಾದದ ಮೂಲಕ ಅನೇಕ ಸೂಕ್ಷ್ಮ ಸಂಗತಿಗಳನ್ನು ಅರ್ಥಮಾಡಿಕೊಂಡಿದ್ದೇವೆ. ಅವರ ಚಿಂತನೆಗಳು ನಮ್ಮನ್ನು ಮುನ್ನಡೆಸುವಲ್ಲಿ ನಮಗೆ ನೆರವಾಗಿವೆ.
“ಸಮುದಾಯ ಕರ್ನಾಟಕ”ವು ಸೀತಾರಾಮ್ ಯೆಚೂರಿಯವರಿಗೆ ಗೌರವದ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ. ಅವರ ಸಂಗಾತಿಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ಸಮುದಾಯದ ಹಿರಿಯ ಕಾರ್ಯಕರ್ತರಾದ ವಾಸುದೇವ ಉಚ್ಚಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.