ಹಿರಿಯ ನಾಯಕ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ (73) ಗುರುವಾರ ನಿಧನರಾದರು.
ತೀವ್ರ ಉಸಿರಾಟದ ಸೋಂಕಿನಿಂದಾಗಿ ಅವರು ಆಗಸ್ಟ್ 19 ರಿಂದ ಏಮ್ಸ್ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
1952 ರಲ್ಲಿ ಚೆನ್ನೈನಲ್ಲಿ ಸರ್ವೇಶ್ವರ ಯೆಚೂರಿ ಮತ್ತು ಕಲ್ಪಕಂ ಯೆಚೂರಿ ದಂಪತಿಗೆ ಸೀತಾರಂ ಯೆಚೂರಿ ಜನಿಸಿದರು. ತೆಲಂಗಾಣದ ಆಲ್ ಸೇಂಟ್ಸ್ ಹೈಸ್ಕೂಲ್ ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ (ಆನರ್ಸ್) ಪಡೆದು, ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್ಯು) ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. ಜೆಎನ್ಯುನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿ ಮಾಡುವಾಗ ತುರ್ತು ಪರಿಸ್ಥಿತಿಯ ಎದುರಾಗಿ ಬಂಧನಕ್ಕೊಳಗಾದರು. PhD ಅಧ್ಯಯನವನ್ನು ಮೊಟಕುಗೊಳಿಸಲಾಯಿತು.
1970 ರ ದಶಕದಲ್ಲಿ, ಯೆಚೂರಿ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. 1984 ರ ಹೊತ್ತಿಗೆ, ಅವರು ಸಿಪಿಎಂನ ಕೇಂದ್ರ ಸಮಿತಿಗೆ ಚುನಾಯಿತರಾದರು, ನಂತರ ಪ್ರಮುಖ ಪೂರ್ಣ ಸಮಯದ ಪಕ್ಷದ ಸದಸ್ಯರಾದರು. ಪಕ್ಷದಲ್ಲಿ ಅವರ 1978 ರಿಂದ 1998 ರವರೆಗೆ ಅಧಿಕಾರ ವಹಿಸಿಕೊಂಡಿದ್ದರು.