ರಾಜ್ಯದ ಜನಪದ ಕಲಾವಿದರಿಗೆ ಜನಪದ ಸಿರಿ ವತಿಯಿಂದ ರಾಷ್ಟ್ರೀಯ ಜನಪದ ಸಿರಿ ಪ್ರಶಸ್ತಿ ಗೌರವ ಸಮರ್ಪಣೆ: ಜರಗನಹಳ್ಳಿ ಕಾಂತರಾಜು

Most read

ಬೆಂಗಳೂರು: ಅಂತರಾಷ್ಟ್ರೀಯ ಜಾನಪದ ದಿನಾಚರಣೆ ಅಂಗವಾಗಿ ಕನ್ನಡದ ಪ್ರಖ್ಯಾತ ದೇಸಿ ಚಾನೆಲ್ “ಜನಪದ ಸಿರಿ ಕನ್ನಡ” ರಾಜ್ಯದ ಜನಪದ ಕಲಾವಿದರಿಗೆ ರಾಷ್ಟೀಯ ಗೌರವ ಸಮರ್ಪಣೆ ಎಂಬ ಧ್ಯೇಯದ್ದೋಶದೊಂದಿಗೆ ರಾಷ್ಟ್ರೀಯ ಜನಪದ ಸಿರಿ ಪ್ರಶಸ್ತಿ-2024 ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಆಗಸ್ಟ್ 22 ರಂದು ಸುಚಿತ್ರ ಸಿನಿಮ ಮತ್ತು ಕಲ್ಚರಲ್ ಅಕಾಡೆಮಿಯಲ್ಲಿ ಮಧ್ಯಾಹ್ನ 3:00 ಗಂಟೆಗೆ ಹಮ್ಮಿಕೊಂಡಿದೆ.

ಈ ಕುರಿತು ಆಯೋಜಕರಾದ ಜನಪದ ಸಿರಿ ಕನ್ನಡ ಚಾನೆಲ್ ಸಂಪಾದಕರು ಜರಗನಹಳ್ಳಿ ಕಾಂತರಾಜು ಮಾತನಾಡಿ, ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳವರು, ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಡಾ. ಹಿ.ಚಿ ಬೋರಲಿಂಗಯ್ಯ ಹಾಗೂ ತೇಜಸ್ವಿ ಸೂರ್ಯ ಸಂಸದರು, ವಿರೋಧ ಪಕ್ಷದ ನಾಯಕರು ಆರ್. ಅಶೋಕ್, ಸಿ. ಕೆ ರಾಮಮೂರ್ತಿ ಶಾಸಕರು, ಮುಖಂಡರು ಸೇರಿದಂತೆ ಮುಖ್ಯ ಅತಿಥಿಗಳು ವೇದಿಕೆಯನ್ನು ಅಲಂಕರಿಸಲಿದ್ದಾರೆ ಎಂದು ತಿಳಿಸಿದರು.

ವಿಶ್ವ ಜಾನಪದ ದಿನ ಎಂದೂ ಕರೆಯಲ್ಪಡುವ ಅಂತರಾಷ್ಟ್ರೀಯ ಜಾನಪದ ದಿನವನ್ನು ಪ್ರತಿವರ್ಷ ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಜಾನಪದ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಪರಂಪರೆಯ ವೈವಿಧ್ಯತೆಯನ್ನು ಗುರುತಿಸಲು ಮತ್ತು ಪ್ರಶಂಸಿಸಲು ಈ ದಿನ ವಿಶೇಷವಾಗಿದೆ. ಈ ದಿನದಂದು ಜನರು ತಮ್ಮ ವಿಶಿಷ್ಟ ಜಾನಪದ ಪದ್ಧತಿಗಳು ಸಂಗೀತ, ನೃತ್ಯ, ಕಲೆ ಮತ್ತು ಕಥೆಗಳನ್ನು ಹಂಚಿಕೊಳ್ಳಲು ಮತ್ತು ಆಚರಿಸಲು ಒಟ್ಟಾಗಿ ಸೇರುತ್ತಾರೆ. ಇದು ಒಂದು ಅವಕಾಶ ಸಾಂಪ್ರದಾಯಿಕ ಜಾನಪದ ಸಂಸ್ಕೃತಿಗಳನ್ನು ಉಳಿಸಿ ಮತ್ತು ಉತ್ತೇಜಿಸಿ ಜಾನಪದದ ಮಹತ್ವದ ಬಗ್ಗೆ ಅರಿವು ಮೂಡಿಸಿ ಅದರ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ವಿನಿಮಯವನ್ನು ಪ್ರೋತ್ಸಾಹಿಸಿ ಜಾನಪದ ಕಲಾವಿದರು, ಸಂಗೀತಗಾರರು ಮತ್ತು ಕಥೆಗಾರರ ​​ಕೊಡುಗೆಗಳನ್ನು ಗೌರವಿಸಿ ಅಂತರಾಷ್ಟ್ರೀಯ ಜಾನಪದ ದಿನವು ನಮ್ಮ ಜಗತ್ತನ್ನು ತುಂಬಾ ಆಕರ್ಷಕವಾಗಿ ಮಾಡುವ ಮಾನವ ಅನುಭವಗಳು ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳ ಶ್ರೀಮಂತ ಲೋಕವನ್ನು ಅನ್ವೇಷಿಸಲು ಮತ್ತು ಪ್ರಶಂಸಿಸಲು ಒಳ್ಳೆಯ ಅದ್ಭುತ ಸಂದರ್ಭ ಇದಾಗಿದೆ ಎಂದು ಹೇಳಲಾಗುತ್ತಿದೆ.

‘ರಾಷ್ಟೀಯ ಜನಪದ ಸಿರಿ ಪ್ರಶಸ್ತಿ-2024 ಪುರಸ್ಕೃತರ ಪಟ್ಟಿ’

  1. ಡಾ. ಮೈಸೂರ್ ಗುರುರಾಜ್(ಖ್ಯಾತ ಜಾನಪದ ಕಲಾವಿದರು)
  2. ಡಾ. ಬಾನಂದೂರು ಕೆಂಪಯ್ಯ(ಖ್ಯಾತ ಜಾನಪದ ಕಲಾವಿದರು)
  3. ಶ್ರೀ ಕೃಷ್ಣೆಗೌಡ(ಖ್ಯಾತ ಸೋಬಾನೆ ಕಲಾವಿದರು)
  4. ಡಾ. ಕುರುವ ಬಸವರಾಜ್(ಜಾನಪದ ಅಧ್ಯಯನ ಮತ್ತು ಸಂಶೋಧನೆ)
  5. ಶ್ರೀ ಮಳವಳ್ಳಿ ಗುರುಬಸವಯ್ಯ(ಜಾನಪದ ಜೀವಮಾನ ಸೇವೆ)
  6. ಶ್ರೀಮತಿ ನಾಗರತ್ನಮ್ಮ(ಸಾಹಿತಿಗಳು ಹಾಗೂ ಜನಪದ ಸಂಶೋಧಕರು)
  7. ಶ್ರೀ ಆನಂದ ಮಾದಲಗೆರೆ(ಸುಗಮ ಸಂಗೀತ ಗಾಯಕ ಹಾಗೂ ಸಂಗೀತ ನಿರ್ದೇಶಕ)
  8. ಕು. ಉಮಾ ವೈ. ಜಿ(ರಂಗಕರ್ಮಿ, ನಟಿ ಮತ್ತು ಜಾನಪದ ಗಾಯಕಿ)
  9. ಶ್ರೀ ಪುರಿಗಾಲಿ ಮಹದೇವಸ್ವಾಮಿ(ತಂಬೂರಿ ಕಲೆ, ಮಂಡ್ಯ ಜಿಲ್ಲೆ)
  10. ಶ್ರೀಮತಿ ಬಾನಂದೂರು ಬೋರಮ್ಮ(ಸೋಬಾನೆ ಕಲಾವಿದರು)
  11. ಶ್ರೀ ಪೂಜೆ ಶಿವಣ್ಣ(ಪೂಜಾ ಕುಣಿತ, ರಾಮನಗರ)
  12. ಶ್ರೀ ಆರ್. ಸಿದ್ದರಾಜು ಕೆಬ್ಬೇಪುರ(ಜಾನಪದ ಕಲಾವಿದರು)
  13. ಶ್ರೀ ರಾಚಯ್ಯ(ತತ್ವಪದ ಕಲಾವಿದರು, ಚಾಮರಾಜನಗರ)
  14. ಶ್ರೀ ಕಂಸಾಳೆ ಲಿಂಗಯ್ಯ(ಕಂಸಾಳೆ ಕಲೆ)
  15. ಶ್ರೀ ಆರ್. ರವಿಕುಮಾರ್(ಜಾನಪದ ಶೈಲಿಯ ಗೀತ ರಚನೆಕಾರರು)
  16. ಶ್ರೀ ಗೋವಿಂದರಾಜು(ಚರ್ಮವಾದ್ಯಗಳು(ತಮಟೆ), ರಾಮನಗರ)
  17. ಶ್ರೀ ನಗಾರಿ ಮಂಜು(ನಗಾರಿ ಕಲಾವಿದರು)
  18. ಶ್ರೀ ಅರುಣಕುಮಾರ್ ಮಾಂಬಳ್ಳಿ(ಸುಗಮ ಸಂಗೀತ ಗಾಯಕರು)
  19. ಡಾ. ಪ್ರದೀಪ್ ಕುಮಾರ್ ಸಿಂಗಾನಲ್ಲೂರು(ಜಾನಪದ ಸಾಹಿತ್ಯ ಮಹಾಕಾವ್ಯಗಳ ಅಧ್ಯಯನ)
  20. ಶ್ರೀ ಕಿರಣ್ ಗಿರ್ಗಿ(ಅಭ್ಯಾಸಿ ಟ್ರಸ್ಟ್, ಚಾಮರಾಜನಗರ)
  21. ಶ್ರೀ ಎಸ್. ಎಫ್ ಹುಸೇನಿ ಮೈಸೂರು(ಜಾನಪದ ಕಾಗದ ಕತ್ತರಿ ಕಲೆ)
  22. ಶ್ರೀ ಎಂ. ಕೈಲಾಸ ಮೂರ್ತಿ(ಜಾನಪದ ಕಲಾವಿದ, ಕೊಳ್ಳೆಗಾಲ)
  23. ಶ್ರೀ ದುಂಡು ಮಹದೇವಸ್ವಾಮಿ(ಚಿತ್ರಕಲೆ, ಯಳಂದೂರು)
  24. ಶ್ರೀ ಸಿದ್ದರಾಜು ಕೋಣನ ಕೊಪ್ಪಲು(ತಂಬೂರಿ ಕಲಾವಿದರು)
  25. ಶ್ರೀ ಹಿದಾಯತ್ ಅಹಮದ್(ಡೊಳ್ಳು ಕಲಾವಿದ, ಬೆಂಗಳೂರು)
  26. ಶ್ರೀಮತಿ ಶಾಂತಾ ಹೆಗ್ಗೋಡು(ಡೊಳ್ಳು ಕಲಾವಿದೆ)
  27. ಶ್ರೀ ಆರ್ ಮಹೇಂದ್ರ(ಜಾನಪದ ಗಾಯಕರು, ಮೈಸೂರು)
  28. ಶ್ರೀ ಪಿ. ಮಂಜುನಾಥ್(ಕಂಸಾಳೆ ಯುವ ಕಲಾವಿದರು, ಬೆಂಗಳೂರು)
  29. ಶ್ರೀ ಧನುಷ್(ತಂಬೂರಿ ಯುವ ಕಲಾವಿದ, ಬೆಂಗಳೂರು)
  30. ಶ್ರೀ ಸಾಲುಮರದ ನಾಗರಾಜ್(ಖ್ಯಾತ ಪರಿಸರ ಪ್ರೇಮಿ, ಮಳವಳ್ಳಿ)

ಮುಖ್ಯ ಅತಿಥಿಗಳಾಗಿ ಜಾನಪದ ಅಕಾಡೆಮಿಯ ಗೊಲ್ಲಹಳ್ಳಿ ಶಿವಪ್ರಸಾದ್, ಸಾಹಿತ್ಯ ಅಕಾಡೆಮಿಯ ಎಲ್. ಎನ್ ಮುಕುಂದರಾಜ್, ಬಂಜಾರ ಅಕಾಡೆಮಿಯ ಡಾ. ಎ. ಆರ್ ಗೋವಿಂದಸ್ವಾಮಿ, ಸಂಗೀತ ನೃತ್ಯ ಅಕಾಡೆಮಿಯ ಶ್ರೀಮತಿ ಶುಭ ಧನಂಜಯ, ಶಿಲ್ಪಕಲಾ ಅಕಾಡೆಮಿಯ ಎಂ. ಸಿ ರಮೇಶ್, ಐ ಎಂ ವಿಠ್ಠಲ ಮೂರ್ತಿ ನಿವೃತ್ತ ಐಎಎಸ್ ಅಧಿಕಾರಿಗಳು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ವಿ. ಸುರೇಶ್, ವಿವೇಕ್ ಆಳ್ವಾ, ವಿ. ಹರಿಕೃಷ್ಣ, ಅಂತರಾಷ್ಟ್ರೀಯ ಜಾನಪದ ಕಲಾವಿದರು ಸವಿತಕ್ಕ ಹಾಗೂ ಹಿರಿಯ ಪತ್ರಕರ್ತರಾದ ಗೌರೀಶ್ ಅಕ್ಕಿ ಸೇರಿದಂತೆ ಇನ್ನೀತರರು ಅನೇಕರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

More articles

Latest article