ಅಶಿಸ್ತಿನ ಕಾರಣದಿಂದ ಭಾರತದ ಕುಸ್ತಿಪಟು ಅಂತಿಮ್ ಫಂಘಾಲ್ ಪ್ಯಾರಿಸ್ ಒಲಿಂಪಿಕ್ಸ್‌ ನಿಂದ ಹೊರಕ್ಕೆ

Most read

ಪ್ಯಾರಿಸ್ ಒಲಿಂಪಿಕ್​​ನಲ್ಲಿ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಕುಸ್ತಿಪಟು ಅಂತಿಮ್ ಫಂಘಾಲ್ ಅವರನ್ನು ಅಶಿಸ್ತಿನ ಕಾರಣದಿಂದ ಪಂದ್ಯದಿಂದ ಹೊರಕ್ಕೆ ಕಳಿಸಿದೆ.

ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಪ್ರವೇಶಿಸಲು ಅಂತಿಮ್ ಫಂಘಾಲ್ ಅವರ ಅಧಿಕೃತ ಐಡಿ ಕಾರ್ಡ್‌ ಅನ್ನು ಸಹೋದರಿ ನಿಶಾ ಬಳಸಿ ಸಿಕ್ಕಿಬಿದ್ದಿದ್ದಾರೆ. ಒಲಿಂಪಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆಟದಿಂದ ಹೊರ ಹಾಕಲಾಗಿದೆ.

ಅಂತಿಮ್ ಫಂಘಾಲ್ ಪ್ರಿ ಕ್ವಾರ್ಟರ್ ಫೈನಲ್​​ನಲ್ಲಿ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ 0-10 ಅಂತರದಲ್ಲಿ ಸೋತಿದ್ದರು. ನಂತರ ತನ್ನ ತರಬೇತುದಾರ ಹಾಗೂ ಸಹೋದರಿಯೊಂದಿಗೆ ತಾವು ಉಳಿದಿದ್ದ ಹೋಟೆಲ್​​ಗೆ ಹೋಗಿದ್ದಾರೆ. ಆದರೆ ಅಂತಿಮ್ ಫಂಘಾಲ್ ಗೇಮ್ಸ್ ವಿಲೇಜ್‌ನಲ್ಲಿ ತಮ್ಮ ಬ್ಯಾಗ್​​​ ಬಿಟ್ಟ ಕಾರಣ, ತನ್ನ ಸಹೋದರಿ ನಿಶಾ ಅವರಿಗೆ ತಮ್ಮ ಅಧಿಕೃತ ಕಾರ್ಡ್‌ ನೀಡಿ ಬ್ಯಾಗ್​​ ತರಲು ಹೇಳಿದ್ದಾರೆ. ಆದರೆ ಇದೀಗ ಇದು ಒಲಿಂಪಿಕ್​​​​ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಂತಿಮ್ ಫಂಘಾಲ್ ಅವರನ್ನು ಗಡಿಪಾರು ಮಾಡಲಾಗಿದೆ.

ಈ ಕುರಿತು ಭಾರತೀಯ ಒಲಿಂಪಿಕ್ ಸಂಸ್ಥೆ(IOA) ಮಾಹಿತಿ ನೀಡಿದ್ದು, ಶಿಸ್ತಿನ ಉಲ್ಲಂಘನೆಯು ಅಧಿಕಾರಿಗಳ ಗಮನಕ್ಕೆ ಬಂದ ಕಾರಣ ಅಂತಿಮ್ ಫಂಘಾಲ್ ಹಾಗೂ ಅವರ ಸಿಬ್ಬಂದಿಯನ್ನು ವಾಪಸ್ಸು ಭಾರತಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

More articles

Latest article