ಕಳೆದ ಡಿಸೆಂಬರ್ ಕೊನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ 5ನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿಗೆ ಚಾಲನೆ ನೀಡಿದ್ದರು. ಎಲ್ಲ ವಿವಿಗಳ ಅಂಕ ಪಟ್ಟಿಗಳು ಡಿಜಿಟಲೈಸೇಷನ್ ಆಗದ ಕಾರಣ ಅಭ್ಯರ್ಥಿಗಳು ಅರ್ಜಿ ಹಾಕಲು ತಾಂತ್ರಿ ದೋಷ ಎದುರಿಸುತ್ತಿದ್ದಾರೆ.
ಎಲ್ಲ ವಿವಿಗಳ ಅಂಕ ಪಟ್ಟಿಗಳು ಡಿಜಿಟಲೈಸೇಷನ್ ಆಗಿಲ್ಲದ ಕಾರಣ ಅರ್ಜಿ ಹಾಕೋದೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಯುವನಿಧಿಗೆ ಅರ್ಜಿ ಹಾಕುವವರ ಸಂಖ್ಯೆಯೇ ಇಳಿಮುಖವಾಗಿದೆ.
ಅಂಕಪಟ್ಟಿಗಳನ್ನು ನ್ಯಾಡ್ ನಲ್ಲಿ ಅಪ್ಲೋಡ್ ಮಾಡಿಲ್ಲದ ಕಾರಣ ( ನ್ಯಾಡ್) ನ್ಯಾಷನಲ್ ಅಕಾಡೆಮಿಕ್ ಡಿಪೋಸಿಟರಿ ಯುವನಿಧಿ ಸ್ಕೀಂ ಗೆ ಅರ್ಜಿ ಹಾಕಲು ತೊಡಕಾಗಿದೆ ಎಂದು ಮಾಧ್ಯಗಳು ವರದಿ ಮಾಡಿದೆ.
ಬೆಂಗಳೂರು ವಿವಿ, ಅಕ್ಕಮಹಾದೇವಿ ಮಹಿಳಾ ವಿವಿ ಸೇರಿದಂತೆ ಅನೇಕ ವಿವಿಗಳು ಈ ಸಮಸ್ಯೆ ಎದುರಾಗಿದೆ. ಇಲ್ಲಿವರೆಗೆ ಅರ್ಜಿಗಳ ಸಂಖ್ಯೆ ಒಂದು ಲಕ್ಷವನ್ನೂ ದಾಟಿಲ್ಲ ಎಂದು ತಿಳಿದು ಬಂದಿದೆ. ಬೆಳಗಾವಿ, ಬೆಂಗಳೂರು, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚಿನ ಅರ್ಜಿ ಬಂದಿದೆ. 15 ದಿನದಲ್ಲಿ ಕೇವಲ 40 ಸಾವಿರಕ್ಕೂ ಹೆಚ್ಚು ಅರ್ಜಿ ದಾಖಲಾಗಿವೆ.
ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. 2023-24ರ ಶೈಕ್ಷಣಿಕ ವರ್ಷದಲ್ಲಿ ರೂ. 1,250 ಕೋಟಿ ಮತ್ತು ಅದರ ಮುಂದಿನ ವರ್ಷದಲ್ಲಿ2,500 ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ತಿಳಿದು ಬಂದಿದೆ.
ಯುವ ನಿಧಿಗೆ ಯಾರು ಅರ್ಹರು?
ಕಾಂಗ್ರೆಸ್ ಸರ್ಕಾರದ 5ನೇ ಮತ್ತು ಕೊನೆಯ ಗ್ಯಾರಂಟಿ ಯುವ ನಿಧಿಯಾಗಿದೆ. 2022-23 ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಪದವಿ ಪಡೆದು ಆರು ತಿಂಗಳು ಕಳೆದರೂ ಉದ್ಯೋಗ ಲಭಿಸದಿದ್ದರೆ ಮಾಸಿಕ ಭತ್ಯೆ ಪಡೆಯಲು ಅರ್ಹರಾಗುತ್ತಾರೆ.
ಜನವರಿ 12, ಸ್ವಾಮಿ ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಈ ಯೋಜನೆಗೆ ಚಾಲನೆ ದೊರಕಲಿದೆ. ಪದವೀಧರರಿಗೆ ಮಾಸಿಕ 3000ರೂ. ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1,500 ಮಾಸಿಕ ಭತ್ಯೆ ಲಭ್ಯವಾಗಲಿದೆ.
ಎಲ್ಲ ಪದವೀಧರರಿಗೂ ಮಾಸಿಕ ಭತ್ಯೆ ಲಭ್ಯವಾಗುವುದಿಲ್ಲ. ಸ್ವಯಂ ಉದ್ಯೋಗಕ್ಕೆ ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಆರ್ಥಿಕ ಸಹಾಯ ಪಡೆದವರು, ತರಬೇತಿ ಭತ್ಯೆ ಪಡೆಯುತ್ತಿರುವವರು, ಸರ್ಕಾರಿ ಅಥವಾ ಖಾಸಗಿ ಉದ್ಯೋಗ ನಿರ್ವಹಿಸುತ್ತಿರುವವರು ಮತ್ತು ಉನ್ನತ ಶಿಕ್ಷಣಕ್ಕೆ ದಾಖಲಾದವರು ಯುವನಿಧಿಗೆ ಅರ್ಹರಾಗಿರುವುದಿಲ್ಲ.