ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ: ರಾಘವೇಂದ್ರ ಹಿಟ್ನಾಳ್

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂದು ಒಕ್ಕಲಿಗ ಸ್ವಾಮೀಜಿ ಹಾಗೂ ಇನ್ನಿತರೆ ನಾಯಕರು ಹೇಳಿಕೆಗೆ ಉತ್ತರ ಕೊಟ್ಟಿರುವ ಶಾಸಕ ರಾಘವೇಂದ್ರ ಹಿಟ್ನಾಳ್, ನಮ್ಮ ವರಿಷ್ಠರು ಮತ್ತು ನಾಯಕರು ಎಲ್ಲರೂ ತೀರ್ಮಾನ ಮಾಡಿದ್ದು, ಉಳಿದ ಅವಧಿಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ವರಿಷ್ಠರು ಇದರ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈಗ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಐದು ವರ್ಷನೂ ಅವರೇ ಮುಂದುವರೆಯುತ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ತಲುಪಿಸಿದ್ದಾರೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಸಿಎಂ ಸ್ಥಾನ ನೀಡಲು ಕೇವಲ ಒಬ್ಬಿಬ್ಬರು ಸ್ವಾಮೀಜಿ ಹೇಳುತ್ತಿಲ್ಲ. ಅಂತವರೇ ಇಂದು ಜಾಸ್ತಿಯಾಗಿದ್ದಾರೆ. ರಾಜಕೀಯಕ್ಕೂ ಧರ್ಮಕ್ಕೆ ಅಂತರ ಇದ್ದರೆ ಒಳ್ಳೆಯದು ಎಂದು ಚಾಟಿ ಬೀಸಿದ್ದಾರೆ.

More articles

Latest article

Most read