ಮಗುವಿಗೆ ದರ್ಶನ್ ಕೈದಿ ನಂಬರ್ ಹಾಕಿ ಪೋಟೋ‌ಶೂಟ್: ಪೋಷಕರಿಗೆ ಮಕ್ಕಳ ಆಯೋಗದಿಂದ ನೋಟಿಸ್‌

Most read

ನಟ ದರ್ಶನ್‌ ಜೈಲು ಸೇರಿ ಅವರಿಗೆ ಕೈದಿ ನಂಬರ್ ಕೊಡುತ್ತಿದ್ದಂತೆ ಹೊರಗಡೆ ಅದರದ್ದೇ ಟ್ರೆಂಡ್‌ ಆಗುತ್ತಿದೆ. ಕೆಲ ಅಭಿಮಾನಿಗಳು ದರ್ಶನ್‌ ಕೈದಿ ಸಂಖ್ಯೆ 6106 ಅನ್ನು ವಾಹನಗಳ ಮೇಲೆ ಸ್ಟಿಕ್ಕರ್‌, ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಮಗುವಿಗೆ ಕೈದಿ 6106 ಫೋಟೋ ಶೂಟ್ ಮಾಡಿಸಿದವರಿಗೆ ಸಂಕಷ್ಟ ಎದುರಾಗಿದೆ.

ಬಾಲ ನ್ಯಾಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೇಸ್ ದಾಖಲಿಸಿಕೊಂಡಿದ್ದು, ಕೈದಿ ಫೋಟೊ ಶೋಟ್‌ ಮಾಡಿಸಿದವರಿಗೆ ನೋಟಿಸ್‌ ನೀಡಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವಾಗಿಲ್ಲ. ಕುಟುಂಬಸ್ಥರಿಗೆ ಸಮನ್ಸ್ ಜಾರಿ ಮಾಡುತ್ತೇವೆ. ಈ ಬಗ್ಗೆ ಪೊಲೀಸ್ ಐಟಿ ಸೆಲ್‌ಗೆ ಪತ್ರ ಬರೆಯಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೊಸಂಬೆ ತಿಳಿಸಿದ್ದಾರೆ.

ಪೋಷಕರ ನಡೆಯಿಂದ ಮಗುವಿನ ಭವಿಷ್ಯಕ್ಕೆ ತೊಂದರೆ ಉಂಟಾಗಲಿದೆ. ಮುಂದೆ ಆ ಮಗುವನ್ನು ಕೈದಿ ಎಂದು ಕರೆಯಬಹುದು. ಇದು ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದಂತೆ. ಇದೇ ಕಾರಣಕ್ಕೆ ಆಯೋಗ ಕೇಸ್ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ.

More articles

Latest article