ಚಿಕ್ಕಮಗಳೂರು | ಯುವತಿಗೆ ಚಾಕಲೇಟ್ ಕೊಟ್ಟಿದೇ ತಪ್ಪಾಯ್ತಾ? : ಮುಸ್ಲಿಂ ಯುವಕನ ಮೇಲೆ ಗುಂಪು ಹಲ್ಲೆ!

ಚಿಕ್ಕಮಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿರುವುದು ಕಂಡುಬಂದಿದೆ. ಮುಸಲ್ಮಾನ ಯುವಕನೋರ್ವನ ಮೇಲೆ ಯುವಕರ ಗುಂಪು‌ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ದಾರೆ.

ಮಂಗಳವಾರ ಸಂಜೆ ವೇಳೆ ಹಿಂದೂ ಯುವತಿಗೆ ಡೈರಿ ಮಿಲ್ಕ್ ಕೊಡುತ್ತಿದ್ದ ಎಂಬ ಕಾರಣಕ್ಕೆ ಬಣಕಲ್ ಮೂಲದ ಮುಸಲ್ಮಾನ ಯುವಕನಿಗೆ ಮತ್ತೊಂದು ಯುವಕರ‌ ಗಂಪು ಹಲ್ಲೆ ನಡೆಸಿದ್ದಾರೆ.

ಕಾರಿನಲ್ಲಿ ಬಂದ ನಾಲ್ವರು ಯುವಕರು, ಹಲ್ಲೆ ನಡೆಸಿದ್ದು, ಈ ವೇಳೆ ಬಸ್ ನಿಲ್ದಾಣ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಪಿಎಸೈ ಮತ್ತು ಸಿಬಂದಿ ಮುಂದಾಗುವ ಅನಾಹುತ ತಪ್ಪಿಸಿ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ನಾಲ್ವರ ವಿರುದ್ಧ ಪ್ರತ್ಯೇಕ ಎರಡು ಪ್ರಕರಣ‌ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪುಂಡ ಯುವಕರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

More articles

Latest article

Most read